ಬೆಂಗಳೂರು : ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಸಧ್ಯ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ನೋಡಲು ವಿಶೇಷಚೇತನ ಅಭಿಮಾನಿಯೊಬ್ಬ 500ಕಿ.ಮೀ ಕ್ರಮಿಸಿ ಬೆಂಗಳೂರಿಗೆ ಬಂದಿದ್ದಾನೆ.
ಗುಲ್ಬರ್ಗಾದ ಶಾಪುರದಿಂದ ಬೆಂಗಳೂರಿಗೆ ಬಂದಿರುವ ಅಭಿಮಾನಿ ಕಳೆದ ಶುಕ್ವಾರ ತನ್ನ ಊರಿನಿಂದ ತನ್ನ ಮೂರು ಚಕ್ರದ ವಾಹನ ಓಡಿಸಿಕೊಂಡು ಬೆಂಗಳೂರಿನತ್ತ ಹೊರಟು ಇಂದು ಬೆಂಗಳೂರಿಗೆ ತಲುಪಿದ್ದಾನೆ. ನಟ ದರ್ಶನ್ ನೋಡುವವರೆಗೆ ನಾನು ಹಿಂದಿರುಗುವುದಿಲ್ಲ ಎಂದು ಪರಪ್ಪನ ಅಗ್ರಹಾರ ಜೈಲಿನ ಮುಂದೆಯೇ ನಿಂತಿದ್ದಾನೆ.
ಇನ್ನು ಮಾಧ್ಯಮಗಳೊಂದಿಗೆ ಮಾತನಾಡಿರುವ ಆತ, ನಮಗೆ ಡಿ ಬಾಸ್ ಮುಖ್ಯ. ದರ್ಶನ್ ಅವರು ಕೊಲೆ ಮಾಡಿಲ್ಲ. ದರ್ಶನ್ ಅವರನ್ನು ನೋಡಲು ಪೊಲೀಸರು ನನ್ನನ್ನು ಒಳಗೆ ಬಿಡುತ್ತಿಲ್ಲ. ಅವರನ್ನು ನೋಡುವವರೆಗೆ ನಾನು ನಮ್ಮ ಊರಿಗೆ ಹಿಂದಿರುಗುವುದಿಲ್ಲ.
ನೂರಾರು ಜನರಿಗೆ ದರ್ಶನ್ ಸಹಾಯ ಮಾಡಿದ್ದಾರೆ ಹಾಗೆ ನನಗೂ ಸಹಾಯ ಮಾಡಿದ್ದಾರೆ. ಅವರು ಯಾವುದೇ ತಪ್ಪು ಮಾಡಿಲ್ಲ. ಅವರು ಹೊರಗೆ ಬಂದೇ ಬರುತ್ತಾರೆ ಎಂದು ಹೇಳಿದ್ದಾನೆ.





