Mysore
25
scattered clouds

Social Media

ಶನಿವಾರ, 21 ಡಿಸೆಂಬರ್ 2024
Light
Dark

ಬೆಂಗಳೂರಿನಲ್ಲೇ ಶೇ.73 ರಷ್ಟು ಆನ್‌ ಲೈನ್ ಉದ್ಯೋಗ ವಂಚನೆ..!

ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಆನ್‌ ಲೈನ್‌ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅದರಲ್ಲೂ ಸುಮಾರು ಶೇ.73 ರಷ್ಟು ಆನ್‌ ಲೈನ್ ಉದ್ಯೋಗ ವಂಚನೆ ಪ್ರಕರಣಗಳು ಹೆಚ್ಚಾಗಿ ಬೆಂಗಳೂರಿನಲ್ಲಿ ಕಂಡು ಬಂದಿರೋದು ಒಂದು ರೀತಿ ಆತಂಕವನ್ನುಂಟು ಮಾಡಿದೆ.

ಕರ್ನಾಟಕದಲ್ಲಿ 2020 ರಿಂದ ವರದಿಯಾದ ರಾಜ್ಯ ಅಪರಾಧ ದಾಖಲೆಗಳ ಬ್ಯೂರೋ ದತ್ತಾಂಶಗಳ ಪ್ರಕಾರ ಆನ್‌ ಲೈನ್ ಉದ್ಯೋಗ ವಂಚನೆಗಳಲ್ಲಿ ಸುಮಾರು ಶೇ 73 ರಷ್ಟು ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲೇ ಬೆಳಕಿಗೆ ಬಂದಿವೆ. ವಂಚನೆಗೆ ಒಳಗಾದವರಲ್ಲಿ ಟೆಕ್ಕಿಗಳು ಮತ್ತು ವಿದ್ಯಾರ್ಥಿಗಳು ಶೇ.20 ರಿಂದ 30 ರಷ್ಟು ಇದ್ದರೆ, ಉಳಿದವರು ನಿರುದ್ಯೋಗಿಗಳು ಮತ್ತು ಪವೀಧರರು ಎಂಬುವುದು ತಿಳಿದುಬಂದಿದೆ.

ಕಳೆದ ಐದು ವರ್ಷಗಳಿಂದಲೂ ಕೂಡ ಕರ್ನಾಟಕದಲ್ಲಿ ಆನ್‌ ಲೈನ್ ಉದ್ಯೋಗ ವಂಚನೆಗಳ ಪ್ರಕರಣಗಳು ನಿರಂತರವಾಗಿ ಹೆಚ್ಚಾಗುತ್ತಾ ಹೋಗುತ್ತಿವೆ. 2020ರ ಜನವರಿ 1 ಹಾಗೂ 2024 ರ ಮೇ25 ರ ನಡುವೆ ಒಟ್ಟು 9,479 ವಂಚನೆ ಪ್ರಕರಣಗಳು ದಾಖಲಾಗಿದ್ದವು. ಇವುಗಳಲ್ಲಿ 6,905 ಪ್ರಕರಣಗಳು ಬೆಂಗಳೂರು ನಗರದಲ್ಲೇ ವರದಿಯಾಗಿವೆ ಎಂಬ ಅಂಕಿ ಅಂಶಗಳು ಗೊತ್ತಾಗಿವೆ. ಕಳೆದ ವರ್ಷ 4,098 ಪ್ರಕರಣಗಳು ವರದಿಯಾಗಿದ್ದವು. ಆದರೆ ಈ ವರ್ಷ ಕಳೆದ ವರ್ಷದ ಅರ್ಧಕ್ಕಿಂತಲೂ ಹೆಚ್ಚು ಅಂದರೆ 2,185 ವರದಿಯಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ.

 

Tags: