ಬೆಂಗಳೂರು: ಮಹಾಕುಂಭಮೇಳ ಟೂರ್ ಪ್ಯಾಕೇಜ್ ನೆಪದಲ್ಲಿ ಜನರಿಗೆ 70 ಲಕ್ಷ ವಂಚನೆ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ರಾಘವೇಂದ್ರ ರಾವ್ ಎಂಬಾತನೇ ಬಂಧಿತ ಆರೋಪಿಯಾಗಿದ್ದು, ಈತ ಜಾಹೀರಾತು ನೀಡಿ ಅಯೋಧ್ಯೆ, ಕಾಶಿ, ಪ್ರಯಾಗ್‌ರಾಜ್ ಟೂರ್ ಪ್ಯಾಕೇಜ್ ಘೋಷಿಸಿ 7 ದಿನಗಳ ಪ್ಯಾಕೇಜ್‌ಗೆ ತಲಾ 49,000 ಪಡೆದು ಜನರಿಗೆ ವಂಚನೆ ಮಾಡಿದ್ದನು.
ಈ ಸಂಬಂಧ ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ಸಂಬಂಧ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ರಾಘವೇಂದ್ರ ರಾವ್ ಸುಮಾರು 70 ಲಕ್ಷ ವಂಚನೆ ಮಾಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಹಣ ಕಟ್ಟಿರುವ ಜನರು ಈಗ ಕಂಗಾಲಾಗಿದ್ದಾರೆ. ಹೇಗಾದರೂ ಮಾಡಿ ನಮ್ಮ ಹಣವನ್ನು ಆರೋಪಿಯಿಂದ ವಾಪಸ್ ಕೊಡಿಸಿ ಎಂದು ಪೊಲೀಸರ ಬಳಿ ಮನವಿ ಮಾಡುತ್ತಿದ್ದಾರೆ.





