Mysore
27
scattered clouds

Social Media

ಗುರುವಾರ, 14 ಮೇ 2026
Light
Dark

ವಿಶ್ವಕಪ್‌ನ ಮೊದಲ ಪಂದ್ಯದಲ್ಲೇ ಲಂಕಾಗೆ ಸೋಲುಣಿಸಿದ ನಮಿಬಿಯಾ 

ಮೆಲ್ಬರ್ನ್: ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಅರ್ಹತಾ ಸುತ್ತಿನ ‘ಎ’ ಗುಂಪಿನ ಮೊದಲ ಪಂದ್ಯದಲ್ಲಿ ನಮಿಬಿಯಾ ತಂಡ, ಏಷ್ಯಾಕಪ್‌ ಪ್ರಶಸ್ತಿ ವಿಜೇತ ಶ್ರೀಲಂಕಾ ಪಡೆಗೆ ಅಚ್ಚರಿಯ ಸೋಲುಣಿಸಿದೆ.
ಗೀಲಾಂಗ್‌ನಲ್ಲಿರುವ ಸೈಮಂಡ್ಸ್‌ ಕ್ರೀಡಾಂಗಣದಲ್ಲಿ ಇಂದು (ಅಕ್ಟೋಬರ್‌ 16ರಂದು) ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದ ಶ್ರೀಲಂಕಾ ಬೌಲಿಂಗ್‌ ಆಯ್ಕೆ ಮಾಡಿಕೊಂಡಿತು. ಸುಲಭ ಜಯದ ನಿರೀಕ್ಷೆಯಲ್ಲಿದ್ದ ಲಂಕನ್ನರೆದುರು ದಿಟ್ಟ ಆಟವಾಡಿದ ನಮಿಬಿಯಾ ಬ್ಯಾಟರ್‌ಗಳು ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 163 ರನ್‌ ಕಲೆಹಾಕಿದರು.
ಕೇವಲ 28 ಎಸೆತಗಳಲ್ಲಿ 42 ರನ್‌ ಗಳಿಸಿದ ಜಾನ್‌ ಫ್ರೈಲಿಂಕ್‌ ಹಾಗೂ 16 ಎಸೆತಗಳಲ್ಲಿ 31 ರನ್‌ ಗಳಿಸಿದ ಜೆಜೆ ಸ್ಮಿತ್‌ ಉಪಯುಕ್ತ ಆಟವಾಡಿದರು.
ಈ ಗುರಿ ಎದುರು ಲಂಕಾ ತಂಡ ತಿಣುಕಾಡಿತು. ನಮಿಬಿಯಾ ಸಂಘಟಿತ ಬೌಲಿಂಗ್‌ ಎದುರು ದಿಕ್ಕೆಟ್ಟ ದಾಸುನ್‌ ಸನಕಾ ಪಡೆ ಇನ್ನೂ ಒಂದು ಓವರ್‌ ಬಾಕಿ ಇರುವಂತೆಯೇ 108 ರನ್‌ ಗಳಿಸುವಷ್ಟರಲ್ಲೇ ಆಲೌಟ್‌ ಆಯಿತು.
ನಾಯಕ ಸನಕ (29), ಭಾನುಕ ರಾಜಪಕ್ಸ (21) ಹಾಗೂ ಧನಂಜಯ ಡಿ ಸಿಲ್ವಾ (12) ಹೊರತುಪಡಿಸಿ ಯಾರೊಬ್ಬರೂ ಎರಡಂಕಿ ಮೊತ್ತ ಗಳಿಸಲಿಲ್ಲ.

ಹೀಗಾಗಿ 55 ರನ್‌ ಅಂತರದಿಂದ ಹೀನಾಯವಾಗಿ ಸೋಲು ಕಾಣುವಂತಾಯಿತು.

ಇದೇ ಗುಂಪಿನ ಇನ್ನೊಂದು ಪಂದ್ಯ ಇದೇ ಮೈದಾನದಲ್ಲಿ ನಡೆಯುತ್ತಿದ್ದು, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ನೆದರ್ಲೆಂಡ್ಸ್‌ ಹಣಾಹಣಿ ನಡೆಸುತ್ತಿವೆ

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!