Mysore
20
overcast clouds
Light
Dark

ಈ ಬಾರಿಯ ವಿಶ್ವಕಪ್‌ನಲ್ಲಿ ಟೀಮ್‌ ಇಂಡಿಯಾ ಆಟಗಾರರು ನಿರ್ಮಿಸಿದ ದಾಖಲೆಗಳ ಪಟ್ಟಿ

ನಿನ್ನೆ ( ನವೆಂಬರ್‌ 15 ) ನಡೆದ ಸಮಿಫೈನಲ್‌ ಪಂದ್ಯದಲ್ಲಿ ನ್ಯೂಜಿಲೆಂಡ್‌ ತಂಡದ ವಿರುದ್ಧ 70 ರನ್‌ಗಳ ಭರ್ಜರಿ ಜಯವನ್ನು ಸಾಧಿಸಿದ ಟೀಮ್‌ ಇಂಡಿಯಾ ಈ ಬಾರಿಯ ಏಕದಿನ ವಿಶ್ವಕಪ್‌ನಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ಇಂದು ( ನವೆಂಬರ್‌ 16 ) ನಡೆಯುತ್ತಿರುವ ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಎರಡನೇ ಸಮಿಫೈನಲ್‌ ಪಂದ್ಯದಲ್ಲಿ ಯಾವ ತಂಡ ಗೆಲ್ಲಲಿದೆಯೋ ಆ ತಂಡ ಭಾರತದ ಜತೆ ಭಾನುವಾರ ನಡೆಯಲಿರುವ ಫೈನಲ್‌ ಪಂದ್ಯದಲ್ಲಿ ಸೆಣಸಾಡಲಿದೆ.

ಹೀಗೆ ಯಶಸ್ವಿಯಾಗಿ ಫೈನಲ್‌ ತಲುಪಿರುವ ಟೀಮ್‌ ಇಂಡಿಯಾ ಪರ ಯಾವ ಆಟಗಾರರು ಈ ಬಾರಿಯ ವಿಶ್ವಕಪ್‌ ಟೂರ್ನಿಯಲ್ಲಿ ಯಾವ ದಾಖಲೆಗಳನ್ನು ಮಾಡಿದ್ದಾರೆ ಎಂಬ ದಾಖಲೆ ಈ ಕೆಳಕಂಡಂತಿದೆ.

ರೋಹಿತ್‌ ಶರ್ಮಾ ( ನಾಯಕ ) – ಬಲಗೈ ಬ್ಯಾಟ್ಸ್‌ಮನ್‌ – 36 ವರ್ಷ
ಪಂದ್ಯ : 10
ರನ್‌ : 550
ಶತಕ : 1
ಅರ್ಧಶತಕ : 3
ದಾಖಲೆ : ಏಕದಿನ ಕ್ರಿಕೆಟ್‌ ವಿಶ್ವಕಪ್‌ನಲ್ಲಿ ಒಟ್ಟು 51 ಸಿಕ್ಸರ್‌ ಬಾರಿಸಿರುವ ಹಿಟ್‌ಮ್ಯಾನ್‌ ವಿಶ್ವಕಪ್‌ನಲ್ಲಿ ಅತಿಹೆಚ್ಚು ಸಿಕ್ಸರ್‌ ಬಾರಿಸಿರುವ ಆಟಗಾರ ಎಂಬ ವಿಶ್ವ ದಾಖಲೆ ಬರೆದಿದ್ದಾರೆ.

ಶುಬ್‌ಮನ್‌ ಗಿಲ್‌ – ಬಲಗೈ ಬ್ಯಾಟ್ಸ್‌ಮನ್‌ – 24 ವರ್ಷ
ಪಂದ್ಯ : 8
ರನ್‌ : 350
ಅರ್ಧಶತಕ : 4

ವಿರಾಟ್‌ ಕೊಹ್ಲಿ – ಬಲಗೈ ಬ್ಯಾಟ್ಸ್‌ಮನ್‌ – 35 ವರ್ಷ
ಪಂದ್ಯ : 10
ರನ್‌ : 711
ಶತಕ: 3
ಅರ್ಧಶತಕ : 5
ದಾಖಲೆ : ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಶತಕ ಬಾರಿಸಿದ ಆಟಗಾರ ಎಂಬ ವಿಶ್ವದಾಖಲೆ ಬರೆದಿದ್ದಾರೆ. 711 ರನ್‌ಗಳನ್ನು ಈ ಆವೃತ್ತಿಯ ವಿಶ್ವಕಪ್‌ನಲ್ಲಿ ಬಾರಿಸಿರುವ ಕೊಹ್ಲಿ ವಿಶ್ವಕಪ್‌ ಸೀಸನ್‌ ಒಂದರಲ್ಲಿ ಅತಿಹೆಚ್ಚು ರನ್‌ ಬಾರಿಸಿದ ಆಟಗಾರ ಎಂಬ ವಿಶ್ವದಾಖಲೆ ಬರೆದಿದ್ದಾರೆ. ಅಲ್ಲದೇ ವಿಶ್ವಕಪ್‌ ಆವೃತ್ತಿಯೊಂದರಲ್ಲಿ ಅತಿಹೆಚ್ಚು ಬಾರಿ 50+ ರನ್‌ ಬಾರಿಸಿದ ಆಟಗಾರ ಎಂಬ ದಾಖಲೆಯನ್ನೂ ಸಹ ಕೊಹ್ಲಿ ಮಾಡಿದ್ದಾರೆ. ಕೊಹ್ಲಿ ಈ ಬಾರಿ ಒಟ್ಟು 8 ಬಾರಿ 50+ ರನ್‌ ಬಾರಿಸಿದ್ದಾರೆ. ಈ ಬಾರಿಯ ವಿಶ್ವಕಪ್‌ನಲ್ಲಿ ಕೊಹ್ಲಿ ಅತಿಹೆಚ್ಚು ರನ್‌ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಶ್ರೇಯಸ್‌ ಅಯ್ಯರ್‌ – ಬಲಗೈ ಬ್ಯಾಟ್ಸ್‌ಮನ್‌ – 28 ವರ್ಷ
ಪಂದ್ಯ : 10
ರನ್‌ : 526
ಶತಕ : 2
ಅರ್ಧಶತಕ : 3
ದಾಖಲೆ: ಶ್ರೇಯಸ್‌ ಅಯ್ಯರ್‌ ವಿಶ್ವಕಪ್‌ ಆವೃತ್ತಿಯೊಂದರಲ್ಲಿ 500 ಕ್ಕಿಂತ ಹೆಚ್ಚು ರನ್‌ ಬಾರಿಸಿದ ವಿಶ್ವದ ಮೊದಲ ಮಧ್ಯಮ ಕ್ರಮಾಂಕದ ಆಟಗಾರ ಎಂಬ ದಾಖಲೆ ಬರೆದಿದ್ದಾರೆ. ನ್ಯೂಜಿಲೆಂಡ್‌ ವಿರುದ್ಧದ ಪಂದ್ಯದಲ್ಲಿ 67 ಎಸೆತಗಳಿಗೆ ಶತಕವನ್ನು ಪೂರೈಸಿದ ಅಯ್ಯರ್‌ ವಿಶ್ವಕಪ್‌ ನಾಕ್‌ಔಟ್‌ ಪಂದ್ಯಗಳಲ್ಲಿ ಅತಿವೇಗದ ಶತಕ ಬಾರಿಸಿದ ಆಟಗಾರ ಎಂಬ ವಿಶ್ವದಾಖಲೆ ಬರೆದಿದ್ದಾರೆ. ಅಲ್ಲದೇ ವಿಶ್ವಕಪ್‌ನಲ್ಲಿ ಸತತವಾಗಿ ಎರಡು ಶತಕಗಳನ್ನು ಬಾರಿಸಿದ ಮೂರನೇ ಭಾರತೀಯ ಎಂಬ ಸಾಧನೆ ಮಾಡಿದ್ದಾರೆ.

ಕೆಎಲ್‌ ರಾಹುಲ್‌ – ಬಲಗೈ ಬ್ಯಾಟ್ಸ್‌ಮನ್‌, ವಿಕೆಟ್‌ ಕೀಪರ್‌ – 31 ವರ್ಷ
ಪಂದ್ಯ : 10 ( 9 ಇನ್ನಿಂಗ್ಸ್‌ )
ರನ್‌ : 386
ಶತಕ : 1
ಅರ್ಧಶತಕ : 1
ದಾಖಲೆ: ನೆದರ್ಲೆಂಡ್‌ ವಿರುದ್ಧದ ಪಂದ್ಯದಲ್ಲಿ 62 ಎಸೆತಗಳಿಗೆ ಶತಕ ಬಾರಿಸಿದ ಕೆಎಲ್‌ ರಾಹುಲ್‌ ವಿಶ್ವಕಪ್‌ನಲ್ಲಿ ಅತಿ ವೇಗವಾಗಿ ಶತಕ ಬಾರಿಸಿದ ಭಾರತೀಯ ಎಂಬ ದಾಖಲೆ ನಿರ್ಮಿಸಿದರು. ಅಲ್ಲದೇ ವಿಶ್ವಕಪ್‌ನಲ್ಲಿ ರಾಹುಲ್‌ ದ್ರಾವಿಡ್‌ ಬಳಿಕ ಶತಕ ಬಾರಿಸಿದ ಎರಡನೇ ಭಾರತೀಯ ವಿಕೆಟ್‌ ಕೀಪರ್‌ ಎಂಬ ಸಾಧನೆಯನ್ನೂ ಸಹ ಮಾಡಿದರು.

ಸೂರ್ಯಕುಮಾರ್‌ ಯಾದವ್‌ – ಬಲಗೈ ಬ್ಯಾಟ್ಸ್‌ಮನ್‌ – 33 ವರ್ಷ
ಪಂದ್ಯ : 6
ರನ್‌ : 88

ರವೀಂದ್ರ ಜಡೇಜಾ – ಎಡಗೈ ಆಲ್‌ರೈಂಡರ್‌ – 34 ವರ್ಷ
ಪಂದ್ಯ : 10 ( 4 ಇನ್ನಿಂಗ್ಸ್‌ ) ವಿಕೆಟ್‌ : 16
ರನ್‌ : 111

ಮೊಹಮ್ಮದ್‌ ಶಮಿ – ಬಲಗೈ ವೇಗಿ – 33 ವರ್ಷ
ಪಂದ್ಯ : 6
ವಿಕೆಟ್‌ : 23
ದಾಖಲೆ: ಶಮಿ ವಿಶ್ವಕಪ್‌ನಲ್ಲಿ ಅತಿವೇಗವಾಗಿ 50 ವಿಕೆಟ್‌ ಪಡೆದ ವೇಗಿ ಎಂಬ ದಾಖಲೆ ಬರೆದಿದ್ದಾರೆ. ಅಲ್ಲದೇ ವಿಶ್ವಕಪ್‌ನಲ್ಲಿ ಅತಿಹೆಚ್ಚು ವಿಕೆಟ್‌ ಪಡೆದ ಭಾರತೀಯ ಎನಿಸಿಕೊಂಡಿದ್ದಾರೆ. ಇನ್ನು ವಿಶ್ವಕಪ್‌ ಆವೃತ್ತಿಯೊಂದರಲ್ಲಿ ಅತಿಹೆಚ್ಚು ವಿಕೆಟ್‌ ಪಡೆದ ಭಾರತೀಯ ಬೌಲರ್‌ ಎಂಬ ದಾಖಲೆಯನ್ನು ಶಮಿ ಮಾಡಿದ್ದಾರೆ. ಅಲ್ಲದೇ ವಿಶ್ವಕಪ್‌ನಲ್ಲಿ ನಾಲ್ಕು ಬಾರಿ 5 ವಿಕೆಟ್‌ ಗೊಂಚಲು ಪಡೆದಿರುವ ಶಮಿ ಅತಿಹೆಚ್ಚು ಬಾರಿ 5 ವಿಕೆಟ್‌ಗಳ ಗೊಂಚಲನ್ನು ಪಡೆದ ಬೌಲರ್‌ ಎಂಬ ದಾಖಲೆ ಬರೆದಿದ್ದಾರೆ. ಈ ಬಾರಿಯ ಆವೃತ್ತಿಯಲ್ಲಿ ಶಮಿ ಅತಿಹೆಚ್ಚು ವಿಕೆಟ್‌ ಪಡೆದ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಜಸ್‌ಪ್ರೀತ್ ಬುಮ್ರಾ – ಬಲಗೈ ವೇಗಿ – 29 ವರ್ಷ
ಪಂದ್ಯ : 10
ವಿಕೆಟ್‌ : 18

ಕುಲ್‌ದೀಪ್‌ ಯಾದವ್‌ – ಎಡಗೈ ಸ್ಪಿನ್ನರ್‌ – 28 ವರ್ಷ
ಪಂದ್ಯ : 10
ವಿಕೆಟ್‌ : 15

ಮೊಹಮ್ಮದ್‌ ಸಿರಾಜ್‌ – ಬಲಗೈ ವೇಗಿ – 29 ವರ್ಷ
ಪಂದ್ಯ : 10
ವಿಕೆಟ್‌ : 13

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ