Mysore
30
clear sky

Social Media

ಗುರುವಾರ, 06 ಫೆಬ್ರವರಿ 2025
Light
Dark

ಮಹಿಳೆಯರ ವಿಶ್ವಕಪ್‌ : ಶತಕ ಗಳಿಸಿದ ತ್ರಿಷಾ

ಕೌಲಾಲಂಪುರ: ಮಹಿಳೆಯರ 19 ವರ್ಷದೊಳಗಿನವರ ಐಸಿಸಿ ಟಿ-೨೦ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಆರಂಭಿಕ ಆಟಗಾರ್ತಿ ತ್ರಿಷಾ ಗೊಂಗಡಿ ಐತಿಹಾಸಿಕ ಶತಕದ ಸಾಧನೆ ಮಾಡಿದ್ದಾರೆ. ಈ ಮೂಲಕ ತ್ರಿಷಾ ಹತ್ತೊಂಬತ್ತು ವರ್ಷದೊಳಗಿನವರ ಐಸಿಸಿ ಮಹಿಳಾ ವಿಶ್ವಕಪ್ ಇತಿಹಾಸದಲ್ಲೇ ಶತಕ ಗಳಿಸಿದ ಮೊದಲ ಬ್ಯಾಟರ್ ಆಗಿ ಹೊರಹೊಮ್ಮಿದ್ದಾರೆ.

ತ್ರಿಷಾ ಹಾಗೂ ಜಿ.ಕಮಲಿನಿ ಅವರ ಅಮೋಘ ಜತೆಯಾಟದ ನೆರವಿನಿಂದ ಭಾರತ ತಂಡವು ನಿಗಧಿತ 20 ಓವರ್‌ಗಳಲ್ಲಿ ಕೇವಲ ಒಂದು ವಿಕೆಟ್ ನಷ್ಟಕ್ಕೆ 208 ರನ್‌ಗಳ ಬೃಹತ್ ಮೊತ್ತವನ್ನು ಪೇರಿಸಿತು.

ತ್ರಿಷಾ ಹಾಗೂ ಕಮಲಿನಿ ಮೊದಲ ವಿಕೆಟ್‌ಗೆ 13.3 ಓವರ್‌ಗಳಲ್ಲಿ 147 ರನ್‌ಗಳ ಜೊತೆಯಾಟವಾಡಿದರು.
ತ್ರಿಷಾ 59 ಎಸೆತಗಳಲ್ಲಿ 13 ಬೌಂಡರಿ ಹಾಗೂ 4 ಸಿಕ್ಸರ್‌ಗಳ ನೆರವಿನಿಂದ 110 ರನ್ ಗಳಿಸಿ ಅಜೆಯರಾಗುಳಿದರು. ವಮತ್ತೊಂದೆಡೆ ಕಮಲಿನಿ 42 ಎಸೆತಗಳಲ್ಲಿ 9 ಬೌಂಡರಿಗಳ ನೆರವಿನಿಂದ 51 ರನ್ ಗಳಿಸಿದರು.

Tags: