Mysore
14
broken clouds

Social Media

ಗುರುವಾರ, 11 ಡಿಸೆಂಬರ್ 2025
Light
Dark

ಸೆಮಿಸ್‌ನಲ್ಲಿ ಕಣಕಿಳ್ಳಿದಿದ್ದ ಈ ಆಟಗಾರ ಫೈನಲ್‌ನಿಂದ ಹೊರಬೀಳಲಿದ್ದಾರಾ?

ಅಹಮದಾಬಾದ್‌ : ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯು ಅಂತಿಮ ಘಟ್ಟ ತಲುಪಿದ್ದು, ಫೈನಲ್‌ನಲ್ಲಿ ಬಲಿಷ್ಠ ಬಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಪ್ರಶಸ್ತಿಗಾಗಿ ಕಾದಾಟ ನಡೆಸಲಿವೆ. ಆದರೆ ಭಾರತ ತಂಡದಲ್ಲಿ ಫೈನಲ್‌ಗೂ ಮುನ್ನಾ ಕೆಲವೊಂದು ಬದಲಾವಣೆ ತರಲು ಮುಂದಾಗಿದ್ದು, ಯಾರು ತಂಡದಿಂದ ಹೊರಗುಳಿಯಲಿದ್ದಾರೆ ಮತ್ತು ಯಾರು ತಂಡವನ್ನು ಸೇರಲಿದ್ದಾರೆ ಎಂದು ಚರ್ಚೆಯಾಗುತ್ತಿದೆ.

ಸಂಭಾವ್ಯ ತಂಡದಲ್ಲಿ ಫೈನಲ್‌ಗೂ ಮುನ್ನಾ ಭಾರತ ಒಂದೆರೆಡು ಬದಲಾವಣೆ ಮಾಡುವ ನಿಟ್ಟಿನಲ್ಲಿ ಯೋಜನೆ ರೂಪಿಸಿಕೊಂಡಿದೆ. ಭಾರತ ಪರ ಈ ಸೀಸನ್‌ ನಲ್ಲಿ ಕಡಿಮೆ ವಿಕೆಟ್‌ ಪಡೆದು ಸ್ವಲ್ಪಮಟ್ಟಿಗೆ ಕಮಾಲ್‌ ಮಾಡಿರುವ ಮಹಮದ್‌ ಸಿರಾಜ್‌ ಹಾಗೂ ಕಳೆದ 6 ಪಂದ್ಯಗಳಿಂದ ಕೇವಲ 88 ರನ್‌ ಕಲೆಹಾಕಿ ತಮ್ಮ ಕ್ಯಾಮಿಯೋ ತೋರಿಸುವಲ್ಲಿ ವಿಫಲವಾಗಿದ್ದಾರೆ.

ಫೈನಲ್‌ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಎದುರಿಸಲು ಅನುಭವಿ ಆಟಗಾರನ ಮೊರೆ ಹೋಗಿದ್ದಾರೆ ಟೀ ಇಂಡಿಯಾ.

ಅಂದಹಾಗೆ ಫೈನಲ್‌ ಪಂದ್ಯ ಅಹಮದಾಬಾದ್‌ ನ ನರೇಂದ್ರ ಮೋದಿ ಕ್ರೀಡಾಂಗನದಲ್ಲಿ ನಡೆಯಲಿದ್ದು, ಸ್ಪಿನ್‌ ಸ್ನೇಹಿ ಪಿಚ್‌ ನಲ್ಲಿ ಭಾರತ ಆಡಲಿದೆ ಎನ್ನಲಾಗಿದೆ. ಈ ನಿಟ್ಟಿನಲ್ಲಿ ಸದ್ಯ ಜಡೇಜಾ ಹಾಗೂ ಕುಲ್ದೀಪ್‌ ಯಾದವ್‌ ಜೊತೆಗೆ ಮತ್ತೊಬ್ಬ ಅನುಭವಿ ಆಟಗಾರ ರವಿಚಂದ್ರನ್‌ ಅಶ್ವಿನ್‌ ಅವರು ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳಿದ್ದಾರೆ ಎಂದು ಕ್ರಿಕೆಟ್‌ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಸತತ 12 ವರ್ಷಗಳ ಬಳಿಕ ಭಾರತ ತಂಡ ಫೈನಲ್‌ ಲಗ್ಗೆಯಿಟ್ಟಿದ್ದು, ಟ್ರೋಫಿ ಗೆಲ್ಲುವ ನೆಚ್ಚಿನ ತಂಡವಾಗಿದೆ.

ಮತ್ತೊಂದೆಡೆ ಭಾರತಕ್ಕೆ ಬಲಿಷ್ಠ ಆಸ್ಟ್ರೇಲಿಯಾ ಎದುರಾಗಿದ್ದು, ರಣರೋಚಕ ಪಂದ್ಯಕ್ಕೆ ಸಾಕ್ಷಿಯಾಗಲಿದೆ. ಭಾರತ ಒಂದು ವೇಳೆ ವಿಶ್ವಕಪ್‌ ಗೆದ್ದಿದ್ದೇ ಆದಲ್ಲಿ ಆಸ್ಡ್ರೇಲಿಯಾದ 2003ರ ದಾಖಲೆಯನ್ನು ಸರಿಗಟ್ಟಲಿದೆ. (2003ರಲ್ಲಿ ಆಸೀಸ್‌ ಒಂಉ ಪಂದ್ಯವನ್ನು ಸೋಲದೇ ಕಪ್‌ ಗೆದ್ದು ಬೀಗಿತ್ತು.)

ಸಂಭಾವ್ಯ ತಂಡಗಳು

ಟೀಂ ಇಂಡಿಯಾ ತಂಡ
ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್, ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಆರ್. ಅಶ್ವಿನ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್, ಪ್ರಸಿದ್ಧ್ ಕೃಷ್ಣ

ಆಸ್ಟ್ರೇಲಿಯಾ ತಂಡ
ಟ್ರಾವಿಸ್ ಹೆಡ್, ಡೇವಿಡ್ ವಾರ್ನರ್, ಸ್ವೀವ್ ಸ್ಮಿತ್, ಅಲೆಕ್ಸ್ ಕ್ಯಾರಿ, ಜೋಸ್ ಇಂಗ್ಲಿಸ್, ಸೀನ್ ಅಬಾಟ್, ಮಾರ್ನಸ್ ಲಬುಶೇನ್, ಪ್ಯಾಟ್ ಕಮಿನ್ಸ್ (ನಾಯಕ), ಕ್ಯಾಮರೂನ್ ಗ್ರೀನ್, ಜೋಸ್ ಹೇಜಲ್‌ವುಡ್, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸವೆಲ್, ಮಾರ್ಕಸ್ ಸ್ಟೋಯ್ನಿಸ್, ಆಡಮ್ ಝಂಪಾ, ಮಿಚೆಲ್ ಸ್ಟಾರ್ಕ್.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!