ದುಬೈ: ಹಿಂದಿನ ಐಸಿಸಿ ಪಂದ್ಯಗಳ ಸೋಲಿನ ಅನುಭವದಿಂದ ಒಂದು ವರ್ಷದ ಅವಧಿಯಲ್ಲಿ ಎರಡು ಪ್ರಮುಖ ಪ್ರಶಸ್ತಿಗಳನ್ನು ಗೆಲ್ಲಲು ಸಾಧ್ಯವಾಯಿತು ಎಂದು ಭಾರತ ತಂಡದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದ ನಂತರ ಮಾತನಾಡಿದ ಕೊಹ್ಲಿ, ಚಾಂಪಿಯನ್ಸ್ ಟ್ರೋಫಿಯಲ್ಲಿ ಪ್ರಶಸ್ತಿ ಗೆದ್ದು ತುಂಬಾ ದಿನಗಳಾಗದ್ದವು. ಟ್ರೋಫಿ ಗೆಲ್ಲುವುದು ಪ್ರಮುಖವಾಗಿತ್ತು. ಆಸ್ಟ್ರೇಲಿಯಾ ಪ್ರವಾಸದ ನಂತರ ಈ ಪ್ರಶಸ್ತಿ ಗೆದ್ದಿದ್ದೇವೆ. ಈ ಜಯ, ಒಂದು ತಂಡವಾಗಿ ನಮ್ಮ ಆತ್ಮ ವಿಶ್ವಾಸ ಹೆಚ್ಚಿಸಿದೆ ಎಂದು ಹೇಳಿದ್ದಾರೆ.
ಈ ಹಿಂದಿನ ಪಂದ್ಯಗಳಲ್ಲಿ ಒತ್ತಡ ಮೀರಿ ಆಡಲು ನಮ್ಮ ತಂಡದ ಆಟಗಾರರು ವಿಫಲವಾಗುತ್ತಿದ್ದರು. ಈ ವಿಫಲತೆಯ ಅನುಭವದಿಂದ ಈ ಟೂರ್ನಿಯಲ್ಲಿ ಒಬ್ಬೊಬ್ಬರು ಒತ್ತಡವನ್ನು ಮೀರಿ ಆಡಿದ್ದಾರೆ. ಈ ಅನುಭವಗಳಿಂದ ಬಾರಿ ಪಾಠ ಕಲಿತ್ತಿದ್ದೇವೆ ಎಂದಿದ್ದಾರೆ.





