Mysore
29
few clouds

Social Media

ಮಂಗಳವಾರ, 11 ಮಾರ್ಚ್ 2025
Light
Dark

ಟಿ20 ವಿಶ್ವಕಪ್‌ ಗೆದ್ದ ಭಾರತ: ವಿರಾಟ್‌, ರೋಹಿತ್‌ಗೆ ವಿಶೇಷ ಗೌರವ ಸಲ್ಲಿಸಿದ ವಿಸ್ತಾರ ವಿಮಾನ!

ನವದೆಹಲಿ: ಅಮೇರಿಕಾ ಹಾಗೂ ವೆಸ್ಟ್‌ ಇಂಡೀಸ್‌ ಸಹಭಾಗಿತ್ವದಲ್ಲಿ ನಡೆದ 9ನೇ ಆವೃತ್ತಿಯ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಟೀಂ ಇಂಡಿಯಾ ಗೆದ್ದು ಟ್ರೋಫಿ ಮುಡಿಗೇರಿಸಿಕೊಂಡಿದೆ. ಇನ್ನು ಟೀಂ ಇಂಡಿಯಾ ಆಟಗಾರರು ಇಂದು ವೆಸ್ಟ್‌ ಇಂಡೀಸ್‌ನಿಂದ ಭಾರತಕ್ಕೆ ಬಂದಿಳಿದಿದ್ದಾರೆ.

ಭಾರತಕ್ಕೆ ಬಂದ ಟೀಂ ಇಂಡಿಯಾ ಆಟಗಾರರನ್ನು ಪ್ರಧಾನಿ ಮೋದಿ ಸ್ವಾಗತಿಸಿದರು. ಬಳಿಕ ಮೋದಿ ಟೀಂ ಇಂಡಿಯಾ ಆಟಗಾರರ ಜೊತೆ ಸಂವಾದ ನಡೆಸಿದರು.

ಇದೇ ವೇಳೆ ವಿಮಾನಯಾನ ಸಂಸ್ಥೆ ವಿಸ್ತಾರ ಏರ್‌ಲೈನ್ಸ್‌ ಭಾರತ ತಂಡದ ನಾಯಕ ರೋಹಿತ್‌ ಶರ್ಮಾ ಹಾಗೂ ವಿರಾಟ್‌ ಕೊಹ್ಲಿ ಅವರಿಗೆ ವಿಶ್ವಕಪ್‌ ಜಯಿಸಿದ್ದಕ್ಕಾಗಿ ವಿಶೇಷ ಗೌರವ ಸಲ್ಲಿಸಿದೆ.

ದೆಹಲಿಯಿಂದ ಮುಂಬೈ ಆಗಮಿದ ವಿಮಾನ UK1845 ಇದಾಗಿದ್ದು, ವಿರಾಟ್‌ ಕೊಹ್ಲಿಯ ಜೆರ್ಸಿ ನಂಬರ್‌ 18 ಹಾಗೂ ರೋಹಿತ್‌ ಜೆರ್ಸಿ ನಂಬರ್‌ 45ನ್ನು ಜೋಡಿಸಿ ಹೇಳುವ ಮೂಲಕ ಟೀಂ ಇಂಡಿಯಾ ಲೆಜೆಂಡ್ಸ್‌ಗೆ ಟ್ರಿಬ್ಯೂಟ್‌ ನೀಡಿದೆ.

ಈ ಬಗ್ಗೆ ತಮ್ಮ ಎಕ್ಸ್‌ ಖಾತೆಯಲ್ಲಿ ವಿಸ್ತಾರ ಮಾಹಿತಿ ಹಂಚಿಕೊಂಡಿದ್ದು, UK1845 #staytuned ಎಂದು ಹ್ಯಾಷ್‌ಟ್ಯಾಗ್‌ ಬಳಸಿ ಗೌರವಿಸಿದೆ. ಸದ್ಯ ಇದು ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್‌ ಆಗಿದೆ.

Tags: