ನವದೆಹಲಿ: ಇತ್ತೀಚೆಗೆ ಅಮೇರಿಕಾ ಹಾಗೂ ವೆಸ್ಟ್ ಇಂಡೀಸ್ ಸಹಭಾಗಿತ್ವದಲ್ಲಿ ನಡೆದ ಟಿ20 ವಿಶ್ವಕಪ್ ಗೆದ್ದ ಟೀಂ ಇಂಡಿಯಾ ತಂಡದಲ್ಲಿ ಎಲ್ಲವೂ ಬದಲಾಗಿದೆ.
ಮುಖ್ಯ ಕೋಚ್ ಸ್ಥಾನದಿಂದ ಕನ್ನಡಿಗ ರಾಹುಲ ದ್ರಾವಿಡ್ ಅವರ ಅವಧಿ ಮುಗಿದ ಬೆನ್ನಲ್ಲೇ ಗೌತಮ್ ಗಂಭೀರ್ ಅವರು ಕೋಚ್ ಆಗಿ ನೇಮಕಗೊಂಡರು. ಇದು ನಿಜ ಆಗುತ್ತಿದ್ದಂತೆ ವಿರಾಟ್ ಕೊಹ್ಲಿ ಅಭಿಮಾನಿಗಳು ಹಾಗೂ ಗೌತಮ್ ಗಂಭೀರ್ ಅಭಿಮಾನಿಗಳು ಮತ್ತೆ ಕಾದಾಟಕ್ಕೆ ವೇದಿಕೆ ಸಿದ್ದ ಮಾಡಲಾಗಿದೆ ಎಂದು ಊಹಿಸಲಾಗಿತ್ತು.
ಆದರೆ ಇದೆಲ್ಲವನ್ನು ಬದಲಾಯಿಸಿರುವ ವಿರಾಟ್ ಕೊಹ್ಲಿ ತಮ್ಮ ಅಚ್ಚರಿ ಹೇಳಿಕೆ ಮೂಲಕ ಎಲ್ಲರನ್ನು ದಂಗುಬಡಿಸಿದ್ದಾರೆ. ಟೀಂ ಇಂಡಿಯಾದ ಡ್ರೆಸ್ಸಿಂಗ್ ರೂ ವಾತಾವರಣ ಉತ್ತಮವಾಗಿಟ್ಟುಕೊಳ್ಳಲು ತಾವು ಶ್ರಮಿಸುವುದಾಗಿ ಅವರು ವಿರಾಟ್ ಹೇಳಿದ್ದಾರೆ.
ಅಷ್ಟಕ್ಕೂ ವಿರಾಟ್ ಕೊಹ್ಲಿ ಹೇಳಿದ್ದೇನು?: ಮಾಜಿ ಟೀಂ ಇಂಡಿಯಾ ಆಟಗಾರ, ಭಾರತ ತಂಡದ ನೂತನ ಕೋಚ್ ಆಗಿ ನೇಮಕಗೊಂಡಿರುವ ಗಂಭೀರ್ ಅವರೊಂದಿಗಿನ ಎಲ್ಲಾ ವೈರತ್ವವನ್ನು ಮರೆತು ತಂಡಕ್ಕಾಗಿ, ಭಾರತೀಯ ಕ್ರಿಕೆಟ್‌ಗೆ ಕೊಡುಗೆ ನೀಡುವ ಸಲುವಾಗಿ ಶ್ರಮಿಸಲಾಗುವುದು ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ ಎಂದು ಖ್ಯಾತ ಕ್ರಿಕೆಟ್ ಆಪ್ ಕ್ರಿಕ್‌ಬುಜ್ ವರದಿ ಮಾಡಿದೆ.
ನಮ್ಮ ಹಿಂದಿನ ಸಮಸ್ಯೆಗಳು ವೃತ್ತಿಪರ ಸಂಬಂಧದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಗಂಭೀರ್ ಅವರೊಂದಿಗೆ ಕೆಲಸ ಮಾಡಲು ನಮಗೆ ಆರಾಮದಾಯಕವಾಗಿರುತ್ತದೆ ಎಂದು ವಿರಾಟ್ ಹೇಳಿರುವುದಾಗಿ ತಿಳಿದುಬಂದಿದೆ.