Mysore
29
clear sky

Social Media

ಸೋಮವಾರ, 08 ಡಿಸೆಂಬರ್ 2025
Light
Dark

End of An Era : 14 ವರ್ಷ, 123 ಟೆಸ್ಟ್ ವಿರಾಟ್‌ ಸಾಧನೆ

ಹೊಸದಿಲ್ಲಿ : ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಕಿಂಗ್‌ ವಿರಾಟ್‌ ಕೊಹ್ಲಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡುವ ಮೂಲಕ ತಮ್ಮ 14 ವರ್ಷದ ಟೆಸ್ಟ್‌ ಕ್ರಿಕೆಟ್‌ಗೆ ಭಾವನಾತ್ಮಕ ವಿದಾಯ ಹೇಳಿದ್ದಾರೆ.

ವಿರಾಟ್‌ ಕೊಹ್ಲಿ ತಮ್ಮ ಟೆಸ್ಟ್‌ ವೃತ್ತಿ ಜೀವನದಲ್ಲಿ ಏನೆಲ್ಲ ಸಾಧನೆ ಮಾಡಿದ್ದಾರೆ ಎಂಬುದು ಇಲ್ಲಿದೆ.

ವಿರಾಟ್‌, ಭಾರತದ ಟೆಸ್ಟ್‌ ಕ್ರಿಕೆಟ್‌ನ ಅತ್ಯಂತ ಯಶಸ್ವಿ ನಾಯಕ. ಅವರ ನಾಯಕತ್ವದಲ್ಲಿ ಟೀಮ್‌ ಇಂಡಿಯಾ 68 ಪಂದ್ಯಗಳನ್ನು ಆಡಿದ್ದು, 40 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.

ಭಾರತ ತಂಡ 2018-19ರಲ್ಲಿ ಆಸ್ಟ್ರೇಲಿಯಾ ಪ್ರವಾಸ ಮಾಡಿ ಟೆಸ್ಟ್‌ ಸರಣಿಯನ್ನು ಗೆದ್ದಿತ್ತು. ಆಸ್ಟ್ರೇಲಿಯಾದಲ್ಲಿ ಟೆಸ್ಟ್‌ ಸರಣಿ ಗೆದ್ದ ಭಾರತ ಮತ್ತು ಏಷ್ಯಾದ ಮೊದಲ ನಾಯಕ ವಿರಾಟ್‌ ಕೊಹ್ಲಿ ಆಗಿದ್ದಾರೆ.

ಇದನ್ನೂ ಓದಿ:- ಟೆಸ್ಟ್‌ ಕ್ರಿಕೆಟ್‌ಗೆ ವಿರಾಟ್‌ ಕೊಹ್ಲಿ ವಿದಾಯ 

ಟೆಸ್ಟ್‌ ಕ್ರಿಕೆಟ್‌ನಲ್ಲಿ 7 ದ್ವಿಶತಕಗಳನ್ನು ಗಳಿಸಿದ್ದಾರೆ. ಈ ಅವಧಿಯಲ್ಲಿ ಅತಿ ಹೆಚ್ಚು ದ್ವಿಶತಕಗಳನ್ನು ಗಳಿಸಿದ ಭಾರತೀಯ ಬ್ಯಾಟ್ಸ್‌ಮನ್‌ ಕೂಡ ವಿರಾಟ್‌ ಕೊಹ್ಲಿಯೇ ಆಗಿದ್ದಾರೆ.

2019 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ವಿರಾಟ್‌ ಅಜೇಯ 254ರನ್‌ ಗಳಿಸಿ ಟೆಸ್ಟ್‌ನಲ್ಲಿ ಅತಿದೊಡ್ಡ ಇನ್ನಿಂಗ್ಸ್‌ ಗಳಿಸಿದ ನಾಯಕರಾಗಿದ್ದಾರೆ. ಅಲ್ಲದೇ ತವರಿನಲ್ಲಿ ಆಡಿದ ಎಲ್ಲಾ ಸರಣಿಯನ್ನು ಕೊಹ್ಲಿ ತಮ್ಮ ನಾಯಕತ್ವದಲ್ಲಿ ಗೆದ್ದಿದ್ದರು.

ಪದಾರ್ಪಣೆ : 2011 ಜೂನ್‌ 20-23 Vs ವೆಸ್ಟ್‌ ಇಂಡೀಸ್‌
ಕೊನೆಯ ಟೆಸ್ಟ್‌ : 2025 ಜನವರಿ 03-05 Vs ಆಸ್ಟ್ರೇಲಿಯಾ
ಟೆಸ್ಟ್‌ ಪಂದ್ಯಗಳು : 123
ಇನ್ನಿಂಗ್ಸ್‌ : 210
ನಾಟೌಟ್‌ : 13
ರನ್‌ : 9230
ಗರಿಷ್ಟ ರನ್‌ :254*
ಸರಾಸರಿ :46.85
ಸ್ಟ್ರೈಕ್‌ ರೇಟ್‌ : 55.57
ದ್ವಿಶತಕ : 7
ಶತಕ : 30
ಅರ್ಧಶತಕ :31
ಬೌಂಡರಿ : 1027
ಸಿಕ್ಸರ್‌ : 30
ಕ್ಯಾಚ್‌ : 121

Tags:
error: Content is protected !!