Mysore
23
mist

Social Media

ಶನಿವಾರ, 06 ಡಿಸೆಂಬರ್ 2025
Light
Dark

ಏಕದಿನದಲ್ಲಿ ತ್ರಿಶತಕದತ್ತ ವಿರಾಟ್‌ ಕೊಹ್ಲಿ

ದುಬೈ: ಇಂದು ನಡೆಯುವ ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯ ನ್ಯೂಜಿಲೆಂಡ್‌ ವಿರುದ್ಧದ ಪಂದ್ಯ ವಿರಾಟ್‌ ಕೊಹ್ಲಿಗೆ 300ನೇ ಅಂತರಾಷ್ಟ್ರೀಯ ಏಕದಿನ ಪಂದ್ಯವಾಗಿದೆ.

ಈ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಕಣಕ್ಕಿಳಿದರೆ, ಈ ಸಾಧನೆ ಮಾಡಲಿರುವ ಭಾರತದ ಏಳನೇ ಬ್ಯಾಟರ್‌ ಎನಿಸಲಿದ್ದಾರೆ. ಮೊದಲ ಸ್ಥಾನದಲ್ಲಿ ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡೂಲ್ಕರ್‌ ಇದ್ದಾರೆ.

ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ಈಚೆಗೆ ನಡೆದ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಶತಕ ಗಳಿಸಿದ್ದರು.

ವಿರಾಟ್‌ ಕೊಹ್ಲಿ 2008ರಲ್ಲಿ ದಂಬುಲಾದಲ್ಲಿ ಶ್ರೀಲಂಕಾದ ಎದುರು ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಪ್ರಸ್ತುತ ಒಟ್ಟಾರೆ 299 ಪಂದ್ಯಗಳ ಮೂಲಕ 14,085 ರನ್‌ ಬಾರಿಸಿದ್ದಾರೆ.

300ಕ್ಕಿಂತ ಹೆಚ್ಚು ಪಂದ್ಯ ಆಡಿದ ಭಾರತೀಯರು:

                                                      ಪಂದ್ಯ       ರನ್‌
* ಸಚಿನ್‌ ತೆಂಡೂಲ್ಕರ್‌               463          18426
* ಮಹೇಂದ್ರ ಸಿಂಗ್‌ ಧೋನಿ        347          10599
* ರಾಹುಲ್‌ ದ್ರಾವಿಡ್‌                   340         10768
* ಮೊಹಮ್ಮದ್‌ ಅಜುರುದ್ದೀನ್‌   334          9378
* ಸೌರವ್‌ ಗಂಗೂಲಿ                      308        11221
* ಯುವರಾಜ್‌ ಸಿಂಗ್‌                    301          8609

Tags:
error: Content is protected !!