Mysore
28
broken clouds
Light
Dark

Women’s T20 Worldcup 2024| ಟೀಂ ಇಂಡಿಯಾ ಪ್ರಕಟ: ಹರ್ಮನ್‌ಪ್ರೀತ್‌ ಕೌರ್‌ ನಾಯಕಿ!

ನವದೆಹಲಿ: ಇದೇ ಅಕ್ಟೋಬರ್‌ 3ರಿಂದ 20 ವರೆಗೆ ನಡೆಯಲಿರುವ ಮಹಿಳೆಯರ ಟಿ20 ವಿಶ್ವಕಪ್‌ ಟೂರ್ನಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ.

ಹದಿನೈದು ಸದಸ್ಯರ ಬಲ ಹೊಂದಿರುವ ಬಲಿಷ್ಠ ತಂಡವನ್ನು ಬಿಸಿಸಿಐ ಪ್ರಕಟಿಸಿದ್ದು, ಈ ಬಾರಿಯೂ ಸಹಾ ಹರ್ಮನ್‌ಪ್ರೀತ್‌ ಕೌರ್‌ ಅವರೇ ತಂಡವನ್ನು ಮುನ್ನಡೆಸಲಿದ್ದಾರೆ. ಮತ್ತು ತಂಡಕ್ಕೆ ಉಪ ನಾಯಕಿಯಾಗಿ ಸ್ಮೃತಿ ಮಂದಾನ ಅವರು ಆಯ್ಕೆಯಾಗಿದ್ದಾರೆ.

ಇನ್ನು ಈ ಹದಿನೈದು ಸದಸ್ಯರನ್ನೊಳಗೊಂಡ ತಂಡದಲ್ಲಿ ಕನ್ನಡತಿ ಶ್ರೇಯಾಂಕಾ ಪಾಟೀಲ್‌ ಅವರು ಸ್ಥಾನ ಪಡೆದಿದ್ದಾರೆ.

2009 ರಿಂದ ಇಲ್ಲಿಯವರೆಗೆ ಒಟ್ಟು 9 ಬಾರಿ ಮಹಿಳಾ ವಿಶ್ವಕಪ್‌ ಆಯೋಜನೆಯಾಗಿದ್ದು, ಇದರಲ್ಲಿ ಆಸ್ಟ್ರೇಲಿಯಾ ಬರೋಬ್ಬರಿ 6 ಬಾರಿ ವಿಶ್ವ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿದೆ. ಇತ್ತ ಭಾರತ ಈವರೆಗೆ ಒಂದೇ ಒಂದು ವಿಶ್ವಕಪ್‌ ಗೆಲ್ಲುವಲ್ಲಿ ಸಾಧ್ಯವಾಗಿಲ್ಲ. 2020ರ ವಿಶ್ವಕಪ್‌ ಟೂರ್ನಿಯಲ್ಲಿ ಫೈನಲ್ಸ್‌ ತಲುಪಿದ್ದೇ ಟೀಂ ಇಂಡಿಯಾದ ಸಾಧನೆಯಾಗಿದೆ.

ಇಂತಿದೆ ಟೀಂ ಇಂಡಿಯಾ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಶಫಾಲಿ ವರ್ಮಾ, ದೀಪ್ತಿ ಶರ್ಮಾ, ಜೆಮಿಮಾ ರಾಡ್ರಿಗಸ್, ರಿಚಾ ಘೋಷ್ (ವಿ.ಕೀ), ಯಾಸ್ತಿಕಾ ಭಾಟಿಯಾ (ವಿ.ಕೀ), ಪೂಜಾ ವಸ್ತ್ರಾಕರ್, ಅರುಂಧತಿ ರೆಡ್ಡಿ, ರೇಣುಕಾ ಸಿಂಗ್ ಠಾಕೂರ್, ದಯಾಲನ್ ಹೇಮಲತಾ, ಆಶಾ ಶೋಭಾನಾ, ರಾಧಾ ಯಾದವ್, ಶ್ರೇಯಾಂಕಾ ಪಾಟೀಲ್, ಸಜನಾ ಸಜೀವನ್‌

Image