Mysore
23
overcast clouds

Social Media

ಭಾನುವಾರ, 20 ಏಪ್ರಿಲ 2025
Light
Dark

T20 Worldcup 2024: ಭಾರತ vs ದ. ಆಫ್ರಿಕಾ ನಡುವೆ ನಡೆದ ಎಲ್ಲಾ ಟಿ20 ವಿಶ್ವಕಪ್‌ ಪಂದ್ಯಗಳ ಫಲಿತಾಂಶ

ಬಾರ್ಬಡೋಸ್‌ನಲ್ಲಿ ಇಂದು ( ಜೂನ್‌ 29 ) ನಡೆಯಲಿರುವ ಈ ಬಾರಿಯ ಟಿಟ್ವೆಂಟಿ ವಿಶ್ವಕಪ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಲಿದ್ದು, ಯಾವ ತಂಡ ಗೆದ್ದು ಫೈನಲ್‌ ಆಗಲಿದೆ ಎಂಬ ಕುತೂಹಲ ಮೂಡಿದೆ.

ಚೊಚ್ಚಲ ಟಿ 20 ವಿಶ್ವಕಪ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದ ಭಾರತ ಎರಡನೇ ಬಾರಿಗೆ ಚಾಂಪಿಯನ್‌ ಆಗುವತ್ತ ಚಿತ್ತ ನೆಟ್ಟಿದ್ದು, ಇದೇ ಮೊದಲ ಬಾರಿಗೆ ಫೈನಲ್‌ ಪ್ರವೇಶಿಸಿರುವ ದಕ್ಷಿಣ ಆಫ್ರಿಕಾ ಮೊದಲ ವಿಶ್ವಕಪ್‌ ಕನಸು ಕಾಣುತ್ತಿದೆ.

ಇನ್ನು ಎರಡೂ ತಂಡಗಳು ಟಿ ಟ್ವೆಂಟಿ ವಿಶ್ವಕಪ್‌ನಲ್ಲಿ ಇಲ್ಲಿಯವರೆಗೂ ಎಷ್ಟು ಬಾರಿ ಮುಖಾಮುಖಿಯಾಗಿವೆ ಹಾಗೂ ಯಾವ ತಂಡ ಹೆಚ್ಚು ಪಂದ್ಯಗಳನ್ನು ಗೆದ್ದು ಬಲಿಷ್ಠವೆನಿಸಿಕೊಂಡಿದೆ ಎಂಬ ಮಾಹಿತಿ ಈ ಕೆಳಕಂಡಂತಿದೆ..

ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಟಿ20 ವಿಶ್ವಕಪ್ ಮುಖಾಮುಖಿ ‌
ಒಟ್ಟು ಪಂದ್ಯಗಳು: 6
ಭಾರತ ಗೆಲುವು: 4
ದಕ್ಷಿಣ ಆಫ್ರಿಕಾ ಗೆಲುವು: 2

ಭಾರತ vs ದಕ್ಷಿಣ ಆಫ್ರಿಕಾ ನಡುವಿನ ಟಿ20 ವಿಶ್ವಕಪ್‌ ಮುಖಾಮುಖಿಯ ಎಲ್ಲಾ ಪಂದ್ಯಗಳ ಫಲಿತಾಂಶ

2007 -‌ ಗ್ರೂಪ್ ಹಂತದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ 37 ರನ್‌ಗಳ ಗೆಲುವು
2009 – ಗ್ರೂಪ್ ಹಂತದ ಪಂದ್ಯದಲ್ಲಿ ಭಾರತದ ವಿರುದ್ಧ ದಕ್ಷಿಣ ಆಫ್ರಿಕಾಗೆ 12 ರನ್‌ಗಳ ಗೆಲುವು
2010 – ಗ್ರೂಪ್ ಹಂತದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ 14 ರನ್‌ಗಳ ಗೆಲುವು
2012 – ಸೂಪರ್‌ 8 ಹಂತದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ 1 ರನ್‌ ಜಯ
2014 – ಸೆಮಿಫೈನಲ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ 6 ವಿಕೆಟ್‌ಗಳ ಜಯ
2022 – ಗ್ರೂಪ್‌ ಹಂತದ ಪಂದ್ಯದಲ್ಲಿ ಭಾರತದ ವಿರುದ್ಧ ದಕ್ಷಿಣ ಆಫ್ರಿಕಾಗೆ 5 ವಿಕೆಟ್‌ಗಳ ಜಯ

ಒಟ್ಟಾರೆ ಟಿ20 ಮುಖಾಮುಖಿಯಲ್ಲಿ ಯಾರು ಬಲಿಷ್ಠರು?
ಆಡಿದ ಒಟ್ಟು ಪಂದ್ಯಗಳು: 26
ಭಾರತ ಗೆಲುವು: 14
ದಕ್ಷಿಣ ಆಫ್ರಿಕಾ ಗೆಲುವು: 11
ಫಲಿತಾಂಶ ಸಿಗದ ಪಂದ್ಯ: 1

ಸೋಲಿಲ್ಲದ ಸರದಾರರ ಕಾಳಗ: ಈ ಬಾರಿಯ ಟೂರ್ನಿಯಲ್ಲಿ ಇಲ್ಲಿಯವರೆಗೂ ಇತ್ತಂಡಗಳು ತಮ್ಮ ಯಾವುದೇ ಪಂದ್ಯದಲ್ಲಿಯೂ ಸೋತಿಲ್ಲ. ಗ್ರೂಪ್‌, ಸೂಪರ್‌ 8 ಮತ್ತು ಸೆಮಿಫೈನಲ್‌ ಹಂತಗಳು ಸೇರಿದಂತೆ ಒಟ್ಟು 8 ಪಂದ್ಯಗಳಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಕಣಕ್ಕಿಳಿದಿದ್ದು, ಹರಿಣಗಳು ಎಲ್ಲಾ ಪಂದ್ಯಗಳಲ್ಲೂ ಗೆಲುವು ಸಾಧಿಸಿದ್ದರೆ, ಭಾರತ 7 ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ. ಟೀಮ್‌ ಇಂಡಿಯಾದ ಗ್ರೂಪ್‌ ಹಂತದ ಒಂದು ಪಂದ್ಯ ಮಳೆಯಿಂದ ರದ್ದಾಗಿತ್ತು.

Tags: