Mysore
23
overcast clouds

Social Media

ಶನಿವಾರ, 04 ಏಪ್ರಿಲ 2026
Light
Dark

ಟಿ-20 ವಿಶ್ವಕಪ್‌ : ಇಟಲಿ ಮಣಿಸಿ ದಾಖಲೆ ಬರೆದ ಸ್ಕಾಟ್ಲೆಂಡ್‌

ಕೋಲ್ಕತ್ತಾ : ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಸೋಮವಾರ ನಡೆದ ಐಸಿಸಿ ಟಿ20 ವಿಶ್ವಕಪ್ ಪಂದ್ಯದಲ್ಲಿ ಸ್ಕಾಟ್ಲೆಂಡ್ ತಂಡ ಇಟಲಿ ವಿರುದ್ಧ 73 ರನ್‌ಗಳಿಂದ ಗೆಲುವು ಸಾಧಿಸಿ ದಾಖಲೆ ಬರೆದಿದೆ. ಪಂದ್ಯದಲ್ಲಿ ಸ್ಕಾಟ್ಲೆಂಡ್ ಗೆಲುವಿನಲ್ಲಿ ಜಾರ್ಜ್ ಮುನ್ಸೆ ಮತ್ತು ಮೈಕೆಲ್ ಲೀಸ್ಕ್ ಪ್ರಮುಖ ಪಾತ್ರವಹಿಸಿದರು. ಮುನ್ಸೆ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದರೆ, ಲೀಸ್ಕ್ ಬೌಲಿಂಗ್‌ನಲ್ಲಿ ಮಿಂಚಿದರು.

ಮೊದಲ ಬಾರಿಗೆ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾಗಿಯಾಗಿರುವ ಇಟಲಿ, ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಸ್ಕಾಟ್ಲೆಂಡ್‌ನ ಓಪನರ್ ಬ್ಯಾಟರ್‌ಗಳಾದ ಜಾರ್ಜ್ ಮುನ್ಸೆ (84) ಮತ್ತು ಮೈಕೆಲ್ ಜಾನ್ಸ್ (37) 126 ರನ್‌ಗಳ ಜೊತೆಯಾಟ ಆಡಿದರು. ಬ್ರೆಂಡನ್ ಮೆಕ್ಕಲಮ್ (41) ಕೂಡ ಉತ್ತಮ ಪ್ರದರ್ಶನ ನೀಡಿದರು. ಈ ಇಬ್ಬರ ಬ್ಯಾಟಿಂಗ್ ಬಲದಿಂದ ಇಡೀ ತಂಡ 4 ವಿಕೆಟ್ ನಷ್ಟಕ್ಕೆ 207 ರನ್‌ಗಳನ್ನು ಗಳಿಸಲು ಸಹಕರಿಸಿದರು.

ಈ ಗುರಿಯನ್ನು ಬೆನ್ನಟ್ಟಿದ ಇಟಲಿ ಕೇವಲ 134 ರನ್‌ಗಳಿಗೆ ಆಲೌಟ್ ಆಯಿತು. ಈ ಗೆಲುವಿನೊಂದಿಗೆ, ಸ್ಕಾಟ್ಲೆಂಡ್ ಎರಡು ಅಂಕಗಳೊಂದಿಗೆ ತಮ್ಮ ಗುಂಪಿನಲ್ಲಿ ಎರಡನೇ ಸ್ಥಾನ ಗಳಿಸಿತು, ಆದರೆ, ಇಟಲಿ 0 ಅಂಕಗಳೊಂದಿಗೆ ಕೊನೆಯ ಸ್ಥಾನಕ್ಕೆ ತಲುಪಿತು. ಆಫ್-ಸ್ಪಿನ್ನರ್ ಲೀಸ್ಕ್ ವೃತ್ತಿಜೀವನದ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದರು. 17 ರನ್‌ಗಳಿಗೆ ನಾಲ್ಕು ವಿಕೆಟ್‌ಗಳನ್ನು ಪಡೆದು ಇಟಲಿ ತಂಡವನ್ನು ಕಟ್ಟಿಹಾಕಿದರು.

ಇಟಲಿ ಪರ ಬೆನ್ ಮಾನೆಟ್ಟಿ (52) ಮತ್ತು ಹ್ಯಾರಿ ಮಾನೆಟ್ಟಿ (37) ನಾಲ್ಕನೇ ವಿಕೆಟ್‌ಗೆ 23 ರನ್‌ಗಳ ಜೊತೆಯಾಟ ನಡೆಸಿದರು. ತಂಡದ ಯಾವುದೇ ಬ್ಯಾಟ್ಸ್‌ಮನ್‌ಗಳು ಉತ್ತಮ ಪ್ರದರ್ಶನ ನೀಡಲಿಲ್ಲ. ಲೀಸ್ಕ್ ಜೊತೆಗೆ, ಸ್ಕಾಟ್ಲೆಂಡ್ ಪರ ಮಾರ್ಕ್ ವ್ಯಾಟ್ ಎರಡು ವಿಕೆಟ್‌ಗಳನ್ನು ಪಡೆದರು.

Tags:
error: Content is protected !!