Mysore
23
few clouds

Social Media

ಶನಿವಾರ, 14 ಫೆಬ್ರವರಿ 2026
Light
Dark

ಟಿ-20 ವಿಶ್ವಕಪ್‌ | ಸ್ಕಾಟ್ಲೆಂಡ್‌ ವಿರುದ್ಧ ಇಂಗ್ಲೆಂಡ್‌ 5 ವಿಕೆಟ್‌ ಗೆಲುವು

ಕೋಲ್ಕತ್ತ : ಟಿ-20 ವಿಶ್ವಕಪ್‌ನ ಲೀಗ್ ಹಂತದ ಸಿ ಗುಂಪಿನ ಪಂದ್ಯದಲ್ಲಿ ಸ್ಕಾಟ್ಲೆಂಡ್ ವಿರುದ್ಧ ಇಂಗ್ಲೆಂಡ್ ತಂಡವು 5 ವಿಕೆಟ್‌ಗಳ ಗೆಲುವು ಸಾಧಿಸಿದೆ.

ಕೋಲ್ಕತ್ತದ ಈಡನ್ ಗಾರ್ಡನ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸ್ಕಾಟ್ಲೆಂಡ್ ತಂಡವು, ನಾಯಕ ರಿಚೀ ಬೆರಿಂಗ್ಟನ್ (49 ರನ್: 32 ಎಸೆತ) ಅವರ ಬ್ಯಾಟಿಂಗ್ ನೆರವಿನಿಂದ 19.4 ಓವರ್ಗಳಲ್ಲಿ 152 ರನ್ ಗಳಿಸಿತು. 153 ರನ್ ಗುರಿ ಬೆನ್ನಟಿದ ಇಂಗ್ಲೆಂಡ್ ತಂಡವು ಆರಂಭಿಕ ಆಘಾತ ಅನುಭವಿಸಿತು. ಫಿಲ್ ಸಾಲ್ಟ್ (2 ರನ್), ಜೋಸ್ ಬಟ್ಲರ್ (3 ರನ್) ವೈಫಲ್ಯ ಅನುಭವಿಸಿದರು. 13 ರನ್ಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಇಂಗ್ಲೆಂಡ್ ತಂಡಕ್ಕೆ ಜಾಕೋಬ್ ಬೆಥೆಲ್ (32 ರನ್; 28 ಎಸೆತ) ಹಾಗೂ ಟಾಮ್ ಬಾಥಮ್ (63 ರನ್; 41 ಎಸೆತ) ಆಸರೆಯಾದರು.

ಹ್ಯಾರಿ ಬ್ರೂಕ್ ಪಡೆಯು 18.2 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಇಂಗ್ಲೆಂಡ್ ಪರ ಆದಿಲ್ ರಶೀದ್ 3 ವಿಕೆಟ್ ಪಡೆದು ಮಿಂಚಿದರು. ಇಂಗ್ಲೆಂಡ್ ತಂಡವು ಆಡಿರುವ 3 ಪಂದ್ಯಗಳಲ್ಲಿ 2 ರಲ್ಲಿ ಗೆಲುವು ಸಾಧಿಸುವ ಮೂಲಕ 4 ಪಾಯಿಂಟ್‌ಗಳೊಂದಿಗೆ ಸಿ ಗುಂಪಿನಲ್ಲಿ ಎರಡನೇ ಸ್ಥಾನಕ್ಕೇರಿತು.

 

Tags:
error: Content is protected !!