Mysore
19
clear sky

Social Media

ಮಂಗಳವಾರ, 09 ಡಿಸೆಂಬರ್ 2025
Light
Dark

ಟಿ 20 – 2ನೇ ಪಂದ್ಯದಲ್ಲಿ ಟೀo ಇಂಡಿಯಾಗೆ ಗೆಲುವು

ನಾಗ್ಪುರ (ಮಹಾರಾಷ್ಟ್ರ): ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆ್‌ದ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ಜಯ ದಾಖಲಿಸಿದೆ. ಆಸ್ಟ್ರೇಲಿಯಾ ನೀಡಿದ್ದ 91 ರನ್​ಗಳ ಗುರಿಯನ್ನು 7.2 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ ಭಾರತ ತಲುಪಿತು.

ಮೊದಲು ಬ್ಯಾಟ್​ ಮಾಡಿದ ಆಸ್ಟ್ರೇಲಿಯಾ ನಿಗದಿತ 8 ಓವರ್​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 90 ರನ್​ಗಳನ್ನು ಕಲೆ ಹಾಕಿತ್ತು. ಆಸ್ಟ್ರೇಲಿಯಾ ಪರ ಮ್ಯಾಥ್ಯೂ ವೇಡ್ ಅತಿ ಹೆಚ್ಚು ರನ್ ಗಳಿಸಿದರು. 20 ಎಸೆತಗಳಲ್ಲಿ ಮೂರು ಸಿಕ್ಸ್​ ಹಾಗೂ ನಾಲ್ಕು ಬೌಂಡರಿಗಳೊಂದಿಗೆ ಅಜೇಯ 43 ರನ್​ ಗಳಿಸಿದರು. ಇವರಲ್ಲದೆ ನಾಯಕ ಆ್ಯರೋನ್ ಫಿಂಚ್ 15 ಎಸೆತಗಳಲ್ಲಿ ನಾಲ್ಕು ಬೌಂಡರಿ, ಒಂದು ಸಿಕ್ಸ್​ನೊಂದಿಗೆ 31 ರನ್​ ಬಾರಿಸಿದರು. ಈ ಇಬ್ಬರು ಆಟಗಾರರನ್ನು ಹೊರತುಪಡಿಸಿ ಯಾವುದೇ ಬ್ಯಾಟ್ಸ್‌ಮನ್ ಎರಡಂಕಿ ತಲುಪಲು ಸಾಧ್ಯವಾಗಲಿಲ್ಲ.

ಭಾರತದ ಪರ ಅಕ್ಷರ್ ಪಟೇಲ್ ಎರಡು ಮತ್ತು ಜಸ್ಪ್ರೀತ್ ಬುಮ್ರಾ ಒಂದು ವಿಕೆಟ್ ಪಡೆದರು. ಮತ್ತೊಂದೆಡೆ ವಿರಾಟ್ ಕೊಹ್ಲಿ ಮತ್ತು ಹರ್ಷಲ್ ಪಟೇಲ್ ಅವರು ಮರೂನ್ ಗ್ರೀನ್ (5) ಹಾಗೂ ಸ್ಟೀವನ್ ಸ್ಮಿತ್ (8) ರನ್ ಔಟ್​ ಬಲೆಗೆ ಕೆಡವಿದರು.

ಆಸ್ಟ್ರೇಲಿಯಾ ತಂಡ ನೀಡಿದ ಮೊತ್ತವನ್ನು ಬೆನ್ನತ್ತಿದ್ದ ಭಾರತ ತಂಡಕ್ಕೆ ಉತ್ತಮ ಆರಂಭ ದೊರೆಯಿತು. ನಾಯಕ ರೋಹಿತ್​ ಶರ್ಮಾ ಮತ್ತು ಕನ್ನಡಿಗ ಕೆಎಲ್​ ರಾಹುಲ್​ ಮೊದಲ ವಿಕೆಟ್​ಗೆ 39 ರನ್​ಗಳನ್ನು ಕಲೆ ಹಾಕಿದರು. ಬಳಿಕ ವಿರಾಟ್​ ಕೊಹ್ಲಿ ಕಣಕ್ಕಿಳಿದರು. ಇವರು ಸಹ ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಲ್ಲದೇ ಪೆವಿಲಿಯನ್ ಹಾದಿ ಹಿಡಿದರು. ಸೂರ್ಯ ಕುಮಾರ್​ ಯಾದವ್​ ಸಹ ರನ್​ ಕಲೆ ಹಾಕದೇ ಗೋಲ್ಡನ್​ ಡೆಕ್​ಔಟ್​ ಆದರು. ಹಾರ್ದಿಕ್ ಪಾಂಡ್ಯ ಸಹ ಮಿಂಚಲಿಲ್ಲ. ನಾಯಕ ರೋಹಿತ್​ ಶರ್ಮಾ ಜೊತೆಗೂಡಿದ ದಿನೇಶ್​ ಕಾರ್ತಿಕ್ ಗೆಲುವಿನ ಹಾದಿ ತಲುಪಿಸುವಲ್ಲಿ ಯಶಸ್ವಿಯಾದರು.
ಭಾರತ ತಂಡದ ಪರ ರೋಹಿತ್ ಶರ್ಮಾ 46 ರನ್, ಕೆಎಲ್ ರಾಹುಲ್ 10, ಕೊಹ್ಲಿ 11, ಪಾಂಡ್ಯಾ 9 ಮತ್ತು ದಿನೇಶ್ ಕಾರ್ತಿಕ್ 10 ರನ್ ಗಳಿಸಿದರು. ಆಸ್ಟ್ರೇಲಿಯಾ ಪರ ಆ್ಯಡಂ ಝಾಂಪಾ 3 ವಿಕೆಟ್, ಪ್ಯಾಟ್ ಕಮಿನ್ಸ್ 1 ವಿಕೆಟ್ ಕಬಳಿಸಿದರು.
ನಾಗ್ಪುರದಲ್ಲಿ ಮಳೆಯಾಗುತ್ತಿರುವ ಕಾರಣ ಮೈದಾನ ಒದ್ದೆಯಾಗಿ ಈ ಪಂದ್ಯ ಎಂಟು ಓವರ್‌ಗಳಿಗೆ ನಿಗದಿ ಮಾಡಲಾಗಿದೆ. ಎರಡು ಓವರ್‌ಗಳ ಪವರ್‌ಪ್ಲೇ ಇರುತ್ತದೆ. ಒಬ್ಬ ಬೌಲರ್​ಗೆ ಗರಿಷ್ಠ ಎರಡು ಓವರ್‌ಗಳನ್ನು ಬೌಲ್ ಮಾಡಲು ಅವಕಾಶ ನೀಡಲಾಗಿತ್ತು.
Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!