Light
Dark

ದಕ್ಷಿಣ ಆಫ್ರಿಕಾದ ಅಂಪೈರ್ ರೂಡಿ ಕರ್ಟ್ಜೆನ್ ಕಾರು ಅಪಘಾತದಲ್ಲಿ ಸಾವು

ದಕ್ಷಿಣ ಆಫ್ರಿಕಾ : ದಶಕಗಳ ಕಾಲ ಕ್ರಿಕೆಟ್ ಮೈದಾನದಲ್ಲಿ ಅಂಪೈರ್ ಕಾರ್ಯ ನಿರ್ವಹಿಸಿದ್ದ ದಕ್ಷಿಣ ಆಫ್ರಿಕಾದ ಅಂಪೈರ್ ರೂಡಿ ಕರ್ಟ್ಜೆನ್  ಕಾರು ಅಪಘಾತದಲ್ಲಿ  ಸಾವನ್ನಪ್ಪಿದ್ದಾರೆ.

ರಿವರ್ಸ್‌ಡೇಲ್‌ನಲ್ಲಿ ಮಂಗಳವಾರ ಅಪಘಾತ ಸಂಭವಿಸಿದ್ದು, 73 ವರ್ಷದ ಕರ್ಟ್ಜೆನ್ ನೆಲ್ಸನ್ ಮಂಡೇಲಾ ಕೊಲ್ಲಿಯಲ್ಲಿರುವ ತನ್ನ ಮನೆಗೆ ಹೋಗುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಕೇಪ್ ಟೌನ್‌ನಲ್ಲಿ ವಾರಾಂತ್ಯದ ಗಾಲ್ಫ್‌ನಿಂದ ಹಿಂತಿರುಗುತ್ತಿದ್ದ ವೇಳೆ ಈ ಅಪಘಾತ ನಡೆದಿದೆ ಎಂದು ಅವರ ಮಗ ರೂಡಿ ಕರ್ಟ್ಜೆನ್ ಜೂನಿಯರ್ ಅಲ್ಗೋವಾ ಎಫ್ಎಂ ನ್ಯೂಸ್ಗೆ ಮಾಹಿತಿ ನೀಡಿದ್ದಾರೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ