ಬೆಂಗಳೂರು: ಕ್ರಿಕೆಟ್ ಇತಿಹಾಸದ ಬಹುನಿರೀಕ್ಷಿತ ಸರಣಿಯಲ್ಲೊಂದಾದ ಬಾರ್ಡರ್- ಗವಾಸ್ಕರ್ ಟ್ರೋಪಿ ಆರಂಭವಾಗುವ ಮುನ್ನ ಟೀಮ್ ಇಂಡಿಯಾಗೆ ಭಾರೀ ಹಿನ್ನಡೆಯುಂಟಾಗಿದೆ.
ಅಭ್ಯಾಸ ಪಂದ್ಯದ ವೇಳೆ ಭಾರತದ ಯುವ ಬ್ಯಾಟರ್ ಶುಭ್‌ಮನ್ ಗಿಲ್ ಅವರ ಎಡಗೈ ಹೆಬ್ಬೆರಳಿಗೆ ಗಾಯವಾಗಿದ್ದು, ತೀವ್ರ ನೋವು ಅನುಭವಿಸಿ ಮೈದಾನದಿಂದ ಹೊರನಡೆದರು ಎಂದು ಮೂಲಗಳಿಂದ ತಿಳಿದುಬಂದಿದೆ.
ಪರ್ತ್ ಟೆಸ್ಟ್ ಪಂದ್ಯ ನವೆಂಬರ್.22ಕ್ಕೆ ಆರಭವಾಗಲಿದ್ದು, ಅಲ್ಲಿಯವರೆಗೆ ಶುಭಮನ್ ಗಿಲ್ ಸುಧಾರಿಸಿಕೊಳ್ಳವುದು ಕಷ್ಟ ಎಂದು ಹೇಳಲಾಗುತ್ತಿದೆ.
ತಂದೆಯಾಗಿರುವ ಖುಷಿಯಲ್ಲಿರುವ ನಾಯಕ ರೋಹಿತ್ ಶರ್ಮಾ ಅವರು ಸಹ ಮೊದಲ ಟೆಸ್ಟ್ ಆಡುವುದು ಅನುಮಾನವಾಗಿದೆ. ಹಾಗೆಯೇ ಕೆ.ಎಲ್. ರಾಹುಲ್ ಕೂಡ ಅಭ್ಯಾಸ ಪಂದ್ಯ ಆಡುವಾಗ ಚೆಂಡು ಬಲ ಮೊಣಕೈಗೆ ಬಡಿದು ಅವರು ಗಾಯಗೊಂಡಿದ್ದರು. ಹೀಗೆ ಒಬ್ಬರಿಂದೇ ಒಬ್ಬರು ಗಾಯಗೊಳ್ಳುತ್ತಿರುವುದು ಭಾರತ ತಂಡಕ್ಕೆ ತೀವ್ರ ತಲೆನೋವಾಗಿ ಪರಿಣಮಿಸಿದೆ.