ಪ್ಯಾರಿಸ್: ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ವಿಶ್ವ ವಿಖ್ಯಾತ ಕ್ರೀಡಾಕೂಟ ಒಲಂಪಿಕ್ಸ್‌ನಲ್ಲಿ ಭಾರತಕ್ಕೆ ಮತ್ತೊಮ್ಮೆ ನಿರಾಸೆ ಉಂಟಾಗಿದೆ.
ಭಾರತದ ಟೇಬಲ್ ಟೆನಿಸ್ ತಾರೆ ಶ್ರೀಜಾ ಅಕುಲಾ ಅವರು ತಮ್ಮ ಅಭಿಯಾನವನ್ನು ಅಂತ್ಯಗೊಳಿಸಿದ್ದಾರೆ. ಮಣಿಕಾ ಬಾತ್ರಾ ನಂತರ ಶ್ರೀಜಾ ಕೂಡಾ 16ರ ಘಟ್ಟದಲ್ಲಿ ಸೋಲುವ ಮೂಲಕ ಭಾರತಕ್ಕೆ ಮತ್ತೊಂದು ಹಿನ್ನಡೆಯಾಗಿದೆ.
ಚೀನಾದ ಸನ್ ಯಿಂಗ್ಶಾ ವಿರುದ್ಧ 4-0 ಅಂತರಿದಿಂದ ಸೋತು ಟೂರ್ನಿಯಿಂದ ಹೊರನಡೆದರು. ಚೀನಾದ ಸನ್ ಅವರು ಶ್ರೀಜಾ ವಿರುದ್ಧ 10-12 10-12 8-11 3-11 ಅಂಕಗಳಿಂದ ಜಯ ಗಳಿಸಿದರು.
ಇನ್ನು ಈ ಟೂರ್ನಿಯಲ್ಲಿ ಫ್ರೀ ಕ್ವಾರ್ಟರ್ ಹಂತಕ್ಕೆ ತಲುಪುವ ಮೂಲಕ ಭಾರತೀಯ ಆಟಗಾರರೊಬ್ಬರು ಫ್ರೀ ಕ್ವಾರ್ಟರ್‌ಗೆ ತಲುಪಿದ ಎರಡನೇ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಶ್ರೀಜಾ ಪಾತ್ರರಾಗಿದ್ದಾರೆ. ಮಣಿಕಾ ಬಾತ್ರಾ ಅವರು ಟೇಬಲ್ ಟೆನಿಸ್‌ನಲ್ಲಿ ಮೊಲದ ಬಾರಿಗೆ 16ರ ಘಟ್ಟ ತಲುಪಿದ್ದರು. ಈಗ ಶ್ರೀಜಾ ಅವರು ಸಹಾ ಈ ಸಾಧನೆಯನ್ನು ಮಾಡಿದ್ದಾರೆ.





