Mysore
28
scattered clouds

Social Media

ಬುಧವಾರ, 10 ಡಿಸೆಂಬರ್ 2025
Light
Dark

ಪಠಾಣ್‌ ಚಿತ್ರದ ಜನಪ್ರಿಯ ಹಾಡಿಗೆ ಹೆಜ್ಜೆ ಹಾಕಿದ ಶಾರುಕ್‌ ಖಾನ್‌–ವಿರಾಟ್‌ ಕೊಹ್ಲಿ

ಕೋಲ್ಕತ್ತ : ಬಾಲಿವುಡ್‌ ಬ್ಲಾಕ್‌ ಬಾಸ್ಟರ್‌ ಚಿತ್ರ ‘ಪಠಾಣ್‌’ ಹಾಡಿಗೆ ಶಾರುಕ್ ಖಾನ್‌ ಹಾಗೂ ವಿರಾಟ್‌ ಕೊಹ್ಲಿ ಕ್ರಿಕೆಟ್‌ ಮೈದಾನದಲ್ಲಿ ಹೆಜ್ಜೆ ಹಾಕಿದ್ದು, ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇಬ್ಬರು ದಿಗ್ಗಜರು ಒಟ್ಟಿಗೆ ಹೆಜ್ಜೆ ಹಾಕಿರುವುದನ್ನು ಕಂಡು ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ಧಾರೆ.

ಗುರುವಾರ ಕೋಲ್ಕತ್ತಾದ ಈಡನ್‌ ಗಾರ್ಡನ್ಸ್‌ನಲ್ಲಿ ಆರ್‌ಸಿಬಿ ಮತ್ತು ಶಾರುಕ್‌ ಒಡೆತನದ ಕೋಲ್ಕತ್ತ ನೈಟ್‌ ರೈಡರ್ಸ್‌ (ಕೆಕೆಆರ್‌) ನಡುವೆ ಪಂದ್ಯ ನಡೆದಿತ್ತು. ಕೆಕೆಆರ್‌ ತಂಡ 81 ರನ್‌ಗಳಲ್ಲಿ ಆರ್‌ಸಿಬಿಯನ್ನು ಮಣಿಸಿತ್ತು.

ತಂಡ ಗೆದ್ದ ಖುಷಿಯಲ್ಲಿ ಶಾರುಕ್‌ ತೇಲಾಡಿದ್ದು. ತಮ್ಮ ಬ್ಲಾಕ್‌ಬಾಸ್ಟರ್‌ ‘ಪಠಾಣ್‌‘ ಚಿತ್ರದ ಜನಪ್ರಿಯ ಹಾಡು ‘ಜೂಮ್ ಜೋ ಪಠಾಣ್‌‘ ಹಾಡಿಗೆ ನೃತ್ಯ ಮಾಡಿದ್ದಾರೆ. ಈ ವೇಳೆ ಆರ್‌ಸಿಬಿ ನಾಯಕ ವಿರಾಟ್‌ ಕೊಹ್ಲಿಗೂ ನೃತ್ಯ ಮಾಡುವಂತೆ ಹೇಳಿದ್ದಾರೆ. ಶಾರುಕ್‌ ಹೇಳಿಕೊಟ್ಟಂತೆ ಹಾಡಿನ ‘ಹುಕ್‌ ಸ್ಟೆಪ್‌‘ ಹಾಕಲು ವಿರಾಟ್‌ ಪ್ರಯತ್ನಿಸಿದ್ದಾರೆ. ವಿರಾಟ್‌ನ ಕೆನ್ನೆ ಹಿಡಿದು ಶಾರುಕ್‌ ಮಾತನಾಡಿಸುತ್ತಿರುವುದನ್ನು ನೋಡಿ ಅಭಿಮಾನಿಗಳು ಇನ್ನಷ್ಟು ಖುಷಿಪಟ್ಟಿದ್ದಾರೆ.

ಗುರುವಾರ ನಡೆದ ಪಂದ್ಯದಲ್ಲಿ ಕೆಕೆಆರ್‌ ಉತ್ತಮ ಪ್ರರ್ದಶನ ನೀಡಿದ್ದು, ಶಾರ್ದುಲ್‌ ಠಾಕೂರ್‌ 29 ಎಸೆತಗಳಿಗೆ 68 ರನ್‌ ಗಳಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡಿದ್ದಾರೆ. 2019ರ ನಂತರ ಇದೇ ಮೊದಲ ಬಾರಿಗೆ ಕೆಕೆಆರ್‌ ತನ್ನ ತವರು ನೆಲದಲ್ಲಿ ಆಡಿ ಪಂದ್ಯ ಗೆದ್ದಿರುವುದಕ್ಕೆ ಶಾರುಕ್‌ ಖಾನ್‌ ತಂಡದ ನಾಯಕ ನಿತೀಶ್‌ ರಾಣಾ ಅವರಿಗೆ ಅಭಿನಂದನೆ ತಿಳಿಸಿದ್ದಾರೆ.

ಪಂದ್ಯದ ವೇಳೆ ಶಾರುಕ್‌ ಖಾನ್‌ ಪುತ್ರಿ ಸುಹಾನ ಖಾನ್‌, ಬಾಲಿವುಡ್‌ ನಟಿ ಹಾಗೂ ಕೆಕೆಆರ್‌ನ ಸಹ ಸಂಸ್ಥಾಪಕಿ ಜೂಹಿ ಚಾವ್ಲಾ ಉಪಸ್ಥಿತರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!