ಬರ್ಮಿಂಗ್‌ಹ್ಯಾಮ್: ಕಾಮನ್‌ವೆಲ್ತ್ ನಲ್ಲಿ ಭಾರತದ ಸಂದೀಪ್ ಕುಮಾರ್ ಪುರುಷರ 10,000 ಮೀಟರ್ ನಡಿಗೆಯಲ್ಲಿ ಕಂಚಿನ ಪದಕ ಗೆದ್ದಿದ್ದಾರೆ.
ಭಾರತದ ಸಂದೀಪ್ 38 ನಿಮಿಷ 49 ಸೆಕೆಂಡುಗಳಲ್ಲಿ ಓಟ ಮುಗಿಸಿ ಮೂರನೇ ಸ್ಥಾನ ಪಡೆದರು. ಆಸ್ಟ್ರೇಲಿಯದ ಇವಾನ್ ಡನ್ಫಿ 38 ನಿಮಿಷ 36:37 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಚಿನ್ನದ ಪದಕ ಗೆದ್ದು ಅಗ್ರಸ್ಥಾನ ಪಡೆದರು. ಮತ್ತೊಂದೆಡೆ, ಈ ದೂರವನ್ನು 38 ನಿಮಿಷ 42:33 ಸೆಕೆಂಡುಗಳಲ್ಲಿ ಕ್ರಮಿಸಿದ ಡೆಕ್ಲಾನ್ ಟಿಂಗೆ ಬೆಳ್ಳಿ ಪದಕ ಗೆದ್ದರು. ಈವೆಂಟ್‌ನಲ್ಲಿನ ಮತ್ತೊಬ್ಬ ಭಾರತೀಯ ಅಮಿತ್ ಖತ್ರಿ, ಸೀಸನ್ನ ಅತ್ಯುತ್ತಮ ಸಮಯ (43:04.97)ದೊಂದಿಗೆ ಒಂಬತ್ತನೇ ಸ್ಥಾನ ಪಡೆದರು.