Mysore
23
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಬಿಸಿಸಿಐ ಖಡಕ್‌ ಸೂಚನೆ: ದುಲೀಪ್‌ ಟ್ರೋಫಿಯಲ್ಲಿ ಕಾಣಸಿಕೊಳ್ಳಲಿದ್ದಾರೆ ಸ್ಟಾರ್‌ ಬ್ಯಾಟರ್ಸ್‌!

ನವದೆಹಲಿ: ಇದೇ ಸೆಪ್ಟೆಂಬರ್‌ 5 ರಿಂದ ಆರಂಭವಾಗಲಿರುವ ದುಲೀಪ್‌ ಟ್ರೋಫಿಯಲ್ಲಿ ಭಾಗವಹಿಸುವಂತೆ ಟೀಂ ಇಂಡಿಯಾ ಆಟಗಾರರಿಗೆ ಬಿಸಿಸಿಐ ಸೂಚನೆ ನೀಡಲಾಗಿದೆ.

ಶ್ರೀಲಂಕಾ ವಿರುದ್ಧ ಏಕದಿನ ಸರಣಿಯಲ್ಲಿ ಹೀನಾಯ ಸೋಲು ಕಂಡ ಬಳಿಕ ಮುಂಬರುವ ಸರಣಿಗಳಲ್ಲಿ ಭಾರತ ತಂಡದ ಆಟಗಾರರಿಗೆ ಉತ್ತಮ ಪ್ರದರ್ಶನ ತೋರಲು ದುಲೀಪ್‌ ಟ್ರೋಫಿ ಉತ್ತಮ ವೇದಿಕೆಯಾಗಿದ್ದು, ಅದನ್ನು ಬಳಸಿಕೊಳ್ಳುವಂತೆ ಬಿಸಿಸಿಐ ತಿಳಿಸಿದೆ ಎನ್ನಲಾಗಿದೆ.

ಅಂದಹಾಗೆ ಭಾರತ ತಂಡದ ಕ್ಯಾಪ್ಟನ್‌ ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ ಅವರಿಗೆ ಬಿಸಿಸಿಐ ನಿರ್ದೇಶನ ನೀಡಿದೆ. ಹೀಗಾಗಿ ಮುಂಬರುವ ದೇಸೀಯ ಟೂರ್ನಿಗಳಲ್ಲಿ ಭಾರತದ ಸ್ಟಾರ್‌ ಆಟಗಾರರು ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

ಬರೀ ರೋಹಿತ್‌, ಕೊಹ್ಲಿಗೆ ಮಾತ್ರವಲ್ಲದೇ, ಕನ್ನಡಿಗ ಕೆ.ಎಲ್‌ ರಾಹುಲ್‌, ಸೂರ್ಯಕುಮಾರ್‌ ಯಾದವ್‌, ರವೀಂದ್ರ ಜಡೇಜಾ, ಅಕ್ಷರ್‌ ಪಟೇಲ್‌, ಕಲ್ದೀಪ್‌ ಯಾದವ್‌, ಜೈಸ್ವಾಲ್‌, ಶುಬ್‌ಮನ್‌ ಗಿಲ್‌ ಗೆ ದೇಸಿ ಟೂರ್ನಿಗಳಲ್ಲಿ ಆಡುವಂತೆ ಸೂಚಿಸಲಾಗಿದೆ.

ಶ್ರೀಲಂಕಾ ಸರಣಿ ಬಳಿಕ ಇದೇ ಸೆಪ್ಟೆಂಬರ್‌ 19 ರಿಂದ ಬಾಂಗ್ಲಾದೇಶದ ವಿರುದ್ಧ ಮೊದಲ ಟೆಸ್ಟ್‌ ಆಡುವ ಮೂಲಕ ಭಾರತ ಹಾಗೂ ಬಾಂಗ್ಲಾದೇಶ ನಡುವಣ ಸರಣಿ ಆರಂಭವಾಗುತ್ತದೆ. ಇದಕ್ಕೂ ಮೊದಲು ಸಿದ್ಧತೆ ನಡೆಸಿಕೊಳ್ಳಲು ಭಾರತ ತಂಡದ ಆಟಗಾರರಿಗೆ ವೇದಿಕೆ ನೀಡಲಾಗಿದೆ.

ಸೆಪ್ಟೆಂಬರ್‌ 5ರಿಂದ 24 ವರೆಗೆ ದುಲೀಪ್‌ ಟ್ರೋಫಿ ನಡೆಯಲಿದ್ದು, ಇದರಲ್ಲಿ ಆರು ವಲಯಗಳು ಭಾಗವಹಿಸಲಿವೆ.

ಕೇಂದ್ರ, ದಕ್ಷಿಣ, ಪೂರ್ವ, ಪಶ್ಚಿಮ, ಉತ್ತರ ಹಾಗೂ ಈಶಾನ್ಯ ವಲಯಗಳು ಈ ಟ್ರೋಫಿ ಆಡಲಿವೆ. ದಕ್ಷಿಣ ವಲಯದಲ್ಲಿ ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ, ಕೇರಳ, ಹೈದರಾಬಾದ್‌, ಪಾಂಡಿಚೇರಿ ಹಾಗೂ ಗೋವಾ ತಂಡಗಳು ಆಡಲಿವೆ.

Tags: