18ನೇ ಆವೃತ್ತಿಯ ಐಪಿಎಲ್‌ಗಾಗಿ ನಡೆದ ಬಿಡ್‌ನಲ್ಲಿ ಆರ್‌ಸಿಬಿ ಟೀಂ ಆಟಗಾರರನ್ನು ಖರೀದಿಸಿದ ನಂತರ ಹಿಂದಿ ಭಾಷೆಯಲ್ಲಿ ತನ್ನ ಅಧಿಕೃತ ಎಕ್ಸ್ ಖಾತೆ ತೆರೆಯುವ ಮೂಲಕ ಆರ್‌ಸಿಬಿ ಆಟಗಾರರನ್ನು ಕನ್ನಡದ ಜೊತೆಗೆ ಹಿಂದಿಯಲ್ಲೂ ಪರಿಚಯಿಸಿತ್ತು.
ಇದರಿಂದ ಆರ್‌ಸಿಬಿಯು ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿತ್ತು. ಮುಂದೆ ದೊಡ್ಡ ಹೋರಾಟದ ಸುಳಿವು ನೀಡಿದ ಕನ್ನಡಿಗರ ಆಕ್ರೋಶವನ್ನು ತಿಳಿಮಾಡಲು ಕನ್ನಡಕ್ಕೆ ಮೊದಲ ಆದ್ಯತೆ ನೀಡುವುದರ ಜೊತೆಗೆ ಬಹುಭಾಷಾ ವಿಸ್ತರಣಾ ಯೋಜನೆಯನ್ನು ಜಾರಿ ಮಾಡಿದೆ. ಈ ಯೋಜನೆಯಿಂದ ಇತರ ಭಾರತೀಯ ಭಾಷೆಗಳ ಅಭಿಮಾನಿಗಳಿಗೂ ಹತ್ತಿರವಾಗುವ ಉದ್ದೇಶವಿದೆ ಎಂದು ಆರ್‌ಸಿಬಿ ತಿಳಿಸಿದೆ.
ಈಗ ಎದ್ದಿರುವ ವಿವಾದಕ್ಕೆ ಸ್ಪಷ್ಟನೆ ನೀಡುವುದರ ಜೊತೆಗೆ ಆರ್‌ಸಿಬಿ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುತ್ತದೆ. ಪ್ರಪಂಚದಾದ್ಯಂತ ಕೋಟ್ಯಾಂತರ ಅಭಿಮಾನಿಗಳಿರುವ ಐಪಿಎಲ್ ಪ್ರಾಂಚೈಸಿಗಳಲ್ಲಿ ಆರ್‌ಸಿಬಿ ಮುಂಚೂಣಿಯಲ್ಲಿದೆ.
ಕೋಟ್ಯಾಂತರ ಅಭಿಮಾನಿಗಳನ್ನು ಒಳಗೊಳ್ಳುವ ಉದ್ದೇಶದಿಂದ ಬಹುಭಾಷಾ ಸೂತ್ರ ಅಳವಡಿಸಲು ಮೊದಲು ಕನ್ನಡ ಇನ್‌ಸ್ಟಾಗ್ರಾಮ್ ತೆರೆಯಲಾಗಿದೆ. ಇದಕ್ಕೆ ಒಂದು ತಿಂಗಳಲ್ಲೇ 1.6 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್‌ಗಳಾಗಿದ್ದು, ಇದು ಪ್ರಾಂಚೈಸಿಯ ಬದ್ಧತೆ ತೋರಿಸುತ್ತದೆ. ನಂತರ ಬೇರೆ ಭಾಷೆಯ ಚಿಂತನೆ ನಡೆಸಿದೆ.
ಮುಂಬರುವ ದಿನಗಳಲ್ಲಿ 1,000ಕ್ಕೂ ಹೆಚ್ಚು ವೀಡಿಯೋಗಳನ್ನು ಪೋಸ್ಟ್ ಮಾಡಲು ಸಿದ್ಧತೆ ನಡೆಸಿದೆ. AI ಆಧಾರಿತ ತಂತ್ರಜ್ಞಾನ ಬಳಸಿ ಮೊದಲು ಕನ್ನಡಕ್ಕೆ ಆದ್ಯತೆ ನೀಡಲಾಗಿದ್ದು ನಂತರ ಇತರೆ ಭಾಷೆಗಳಿಗೆ ಡಬ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಗುರಿ ಹೊಂದಿದೆ ಎಂದು ತಿಳಿಸಿದೆ.
ಆರ್‌ಸಿಬಿಯ ಬಹುಭಾಷಾ ವಿಸ್ತರಣಾ ಭಾಗವಾಗಿ ಮೊದಲು 2025ರಲ್ಲಿ ತೆಲುಗು ಖಾತೆ ಆರಂಭವಾಗಲಿದ್ದು, 2026ರಲ್ಲಿ ಮಲಯಾಳಂ, ಪಂಜಾಬಿ, ಮತ್ತು ಬಂಗಾಳಿ ಭಾಷೆಗಳಲ್ಲೂ ಖಾತೆ ತೆರೆದು ಮಾಹಿತಿ ಹಂಚಿಕೊಳ್ಳುವುದಾಗಿ ತಿಳಿಸಿದೆ.