ಇಂಡಿಯನ್ ಪ್ರೀಮಿಯರ್ ಲೀಗ್‌ನ 2025ರ ಆವೃತ್ತಿಯು ಮಾರ್ಚ್‌ನಲ್ಲಿ ಪ್ರಾರಂಭವಾಗಲಿದ್ದು ಮತ್ತು ಪ್ರತಿ ದಿನವೂ ಅಭಿಮಾನಿಗಳಲ್ಲಿ ಉತ್ಸಾಹವು ಹೆಚ್ಚಾಗುತ್ತಿದೆ.
ಸೀಸನ್‌ಗೆ ಮುಂಚಿತವಾಗಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಹೊಸ ನಾಯಕನನ್ನು ಘೋಷಣೆ ಮಾಡಿದೆ. ಸ್ಫೋಟಕ ಬ್ಯಾಟರ್ ರಜತ್ ಪಟಿದಾರ್ಗೆ ಕ್ಯಾಪ್ಟನ್ ಪಟ್ಟ ನೀಡಿದೆ.
ಈ ಮೂಲಕ ಭವಿಷ್ಯದಲ್ಲಿ ಪಾಟಿದಾರ್ ಆರ್‌ಸಿಬಿ ಪರ ಇನ್ನೂ ಕೆಲ ವರ್ಷಗಳ ಕಾಲ ಆಡುವ ಕಾರಣ ಯುವ ನಾಯಕತ್ವದ ಮೊರೆ ಹೋಗಿದೆ.
ಈ ಹಿನ್ನೆಲೆಯಲ್ಲಿ ರಜತ್ ಪಾಟಿದಾರ್ ಆರ್‌ಸಿಬಿ ತಂಡದ 8ನೇ ನಾಯಕನಾಗಿ ಆಯ್ಕೆಯಾಗಿದ್ದು, ಯುವ ಆಟಗಾರನ ಮೇಲೆ ಕಪ್ ಗೆಲ್ಲಿಸುವ ಮಹತ್ವದ ಜವಾಬ್ದಾರಿಯಿದೆ.