Mysore
23
mist

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ರಣಜಿ ಟ್ರೋಫಿ: 147 ಎಸೆತಗಳಲ್ಲಿ ತ್ರಿಶತಕ ಸಿಡಿಸಿ ವಿಶ್ವದಾಖಲೆ ಬರೆದ ತನ್ಮಯ್‌

ಹೈದರಾಬಾದ್: ಹೈದರಾಬಾದ್ ತಂಡದ ಆರಂಭಿಕ ಆಟಗಾರ ತನ್ಮಯ್ ಅಗರ್ವಾಲ್ ಶುಕ್ರವಾರ ಪ್ರಥಮ ದರ್ಜೆ ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಬಾರಿಗೆ ಕೇವಲ 147 ಎಸೆತಗಳಲ್ಲಿ ತ್ರಿಶತಕ ಸಿಡಿಸಿ ವಿಶ್ವದಾಖಲೆ ನಿರ್ಮಿಸಿದ್ದಾರೆ.

ಅರುಣಾಚಲ ಪ್ರದೇಶ ವಿರುದ್ಧ ನಡೆದ ಪಂದ್ಯದಲ್ಲಿ ತ್ರಿಶತಕ ದಾಖಲಿಸುವ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ.

ತನ್ಮಯ್‌ ಅಗರ್ವಾಲ್‌ ತಾವೆದುರಿಸಿದ ೧೬೦ ಎಸೆತಗಳಲ್ಲಿ ೩೩ ಬೌಂಡರಿ ಮತ್ತು ೨೧ ಸಿಕ್ಸರ್‌ ಸಹಿತ ಬರೋಬ್ಬರಿ ೩೨೩ ರನ್‌ ಬಾರಿಸಿದ್ದಾರೆ. ಇದರಿಂದ ಹೈದರಾಬಾದ್‌ ದಿನದಾಟದ ಅಂತ್ಯಕ್ಕೆ ೪೮ ಓವರ್‌ಗಳಲ್ಲಿ ಕೇವಲ ಒಂದು ವಿಕೆಟ್‌ ಕಳೆದುಕೊಂಡು ೫೨೯ ರನ್‌ ಕಲೆಹಾಕಿದ್ದು, ೩೫೭ ರನ್‌ಗಳ ಮುನ್ನಡೆ ಸಾಧಿಸಿದೆ.

ಈ ಹಿಂದೆ ಅತ್ಯಂತ ವೇಗದ ತ್ರಿಶಕ ದಾಖಲಿಸಿ 2017ರಲ್ಲಿ ಮಾರ್ಕೊ ಮರಾಯಿಸ್ ಸೃಷ್ಟಿಸಿದ್ದ ದಾಖಲೆಯನ್ನು ಪುಡಿಗಟ್ಟಿದ ಅಗಾಲ್ ತಮ್ಮ ಇನಿಂಗ್‌ಸ್ ನಲ್ಲಿ 33 ಬೌಂಡರಿ ಹಾಗೂ 21 ಸಿಕ್ಸರ್ ಸಿಡಿಸಿದರು. ಇದು ಕೂಡಾ ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ದಾಖಲೆಯಾಗಿದೆ. ಇದಕ್ಕೂ ಮುನ್ನ ಇಶಾನ್ ಕಿಶನ್ ಪ್ರಥಮ ದರ್ಜೆ ಕ್ರಿಕೆಟ್ನ ಒಂದು ಇನಿಂಗ್‌ಸ್ ನಲ್ಲಿ ಗರಿಷ್ಠ ಸಿಕ್ಸ‌ರ್ ಸಿಡಿಸಿದ ದಾಖಲೆ ಹೊಂದಿದ್ದರು. ರಣಜಿ ಇತಿಹಾಸದಲ್ಲಿ ಒಂದೇ ದಿನ ತ್ರಿಶತಕ ಪೂರೈಸಿದ ಮೊದಲ ಬ್ಯಾಟ್‌ಸ್ ಮನ್ ಎಂಬ ದಾಖಲೆಗೂ ಪಾತ್ರರಾದರು.

160 ಎಸೆತಗಳಲ್ಲಿ ಅಜೇಯ 323 ರನ್ ಗಳಿಸಿರುವ ಅಗಾಲ್, ಒಂದೇ ದಿನ ಅತ್ಯಂತ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಏಳನೇ ಸ್ಥಾನ ಪಡೆದರು. ನಿಮಿಷಗಳ ಆಧಾರದಲ್ಲಿ ಇದು ಎರಡನೇ ಅತಿವೇಗದ ತ್ರಿಶತಕವಾಗಿದೆ.

ಪ್ರಥಮ ದರ್ಜೆಯಲ್ಲಿ ಈ ಹಿಂದೆಯಿದ್ದ ದಕ್ಷಿಣ ಆಫ್ರಿಕಾದ ಮಾರ್ಕೊ ಮರೈಸ್‌ ಅವರ ಬೋರ್ಡರ್‌-ವೆಸ್ಟರ್ನ್ ಪ್ರಾವಿನ್ಸ್‌ ನಡುವಿನ ಪಂದ್ಯದಲ್ಲಿ 191 ಎಸೆತಗಳಿಂದ 300 ರನ್‌ ಬಾರಿಸಿದ್ದ ದಾಖಲೆಯನ್ನು ಮುರಿಯುವಲ್ಲಿ ತನ್ಮಯ್‌ ಯಶಸ್ವಿಯಾಗಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ