Mysore
19
clear sky

Social Media

ಸೋಮವಾರ, 23 ಡಿಸೆಂಬರ್ 2024
Light
Dark

ರಣಜಿ ಟ್ರೋಫಿ: ಕರ್ನಾಟಕಕ್ಕೆ 124 ರನ್‌ ಮುನ್ನಡೆ

ಹುಬ್ಬಳ್ಳಿ: ಇಲ್ಲಿನ ಕೆಎಸ್‌ಸಿಯ ಮೈದಾನದಲ್ಲಿ ನಡೆಯುತ್ತಿರುವ ಕರ್ನಾಟಕ ಮತ್ತು ಪಂಜಾಬ್‌ ನಡುವಿನ ರಣಜಿ ಟ್ರೋಫಿ ಟೆಸ್ಟ್‌ ಪಂದ್ಯದಲ್ಲಿ ಕರ್ನಾಟಕ ತಂಡ 124 ರನ್‌ಗಳ ಮುನ್ನಡೆ ಕಾಯ್ದುಕೊಂಡಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಪಂಜಾಬ್‌ ಕೌಶಿಕ್‌ ದಾಳಿಗೆ ನಲುಗಿ ಹೋಯಿತು. 41 ರನ್‌ಗಳಿಗೆ 7 ವಿಕೆಟ್‌ ಕಬಳಿಸಿ ಪಂಜಾಬ್‌ಗೆ ಕಂಟಕವಾದರು. ಕರ್ನಾಟಕ ತಂಡದ ಬೌಲಿಂಗ್‌ ದಾಳಿಗೆ ನಲುಗಿದ ಪಂಜಾಬ್‌ ತನ್ನ ಮೊಲದ ಇನ್ನಿಂಗ್ಸ್‌ನಲ್ಲಿ 152 ರನ್‌ಗಳಿಗೆ ಸರ್ವಪತನ ಕಂಡಿತು.

153 ರನ್‌ಗಳ ಬೆನ್ನತ್ತಿದ ಕರ್ನಾಟಕ ತಂಡ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 8 ವಿಕೆಟ್‌ ಕಳೆದುಕೊಂಡು ಬರೋಬ್ಬರಿ 514 ರನ್‌ ಗಳಿಸಿ ಎದುರಾಳಿ ತಂಡಕ್ಕೆ 362 ರನ್‌ಗಳ ಟ್ರಯಲ್‌ ನೀಡಿತು. ಈ ಇನ್ನಿಂಗ್ಸ್‌ನಲ್ಲಿ ದೇವದತ್‌ ಪಡಿಕ್ಕಲ್‌ 216 ಎಸೆತಗಳಲ್ಲಿ 24 ಬೌಂಡರಿ ಮತ್ತು 4 ಸಿಕ್ಸರ್‌ಗಳ ಮೂಲಕ 193 ರನ್‌ಗಳಿಸಿದರು. ಇವರಿಗೆ ಸಾಥ್‌ ನೀಡಿದ ಮನೀಶ್‌ ಪಾಂಡೆ 165 ಎಸೆತಗಳಲ್ಲಿ 13 ಬೌಂಡರಿ ಮತ್ತು 3 ಸಿಕ್ಸರ್‌ ಸಹಿತ 118 ರನ್‌ ಕಲೆಹಾಕಿದರು.

ಕರ್ನಾಟಕ ತಂಡ ಮೂರನೇ ದಿನದಾಟವನ್ನು 497/7 ರನ್‌ನೊಂದಿಗೆ ಆರಂಭಿಸಿತು. ಶರತ್‌ ಅವರ 76 ರನ್‌ ತಂಡವನ್ನು 500ರ ಗಡಿ ದಾಟಿಸುವಲ್ಲಿ ಯಶಸ್ವಿಯಾಯಿತು. ಮೂರನೇ ದಿನ ಊಟದ ಸಮಯಕ್ಕೆ ಡಿಕ್ಲೇರ್‌ ಮಾಡಿಕೊಂಡ ಕರ್ನಾಟಕ 514 ರನ್‌ ಬಾರಿಸಿ ಪಂಜಾಬ್‌ಗೆ 362 ರನ್‌ಗಳ ಟ್ರಯಲ್‌ ನೀಡಿತು.

ಇನ್ನು ಈ ಬೃಹತ್‌ ಮೊತ್ತ ಬೆನ್ನಟ್ಟಿದ ಪಂಜಾಬ್‌ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ ಚೇತರಿಕೆ ಆಟ ಆಡಿತು. ಆರಂಭಿಕ ಬ್ಯಾಟರ್‌ ಅಭಿಷೇಕ್‌ ಶರ್ಮಾ 91, ಪ್ರಭ್‌ಸಿಮ್ರನ್‌ ಸಿಂಗ್‌ 100 ರನ್‌ ಗಳಿಸಿ ಉತ್ತಮ ಆರಂಭ ನೀಡಿದರು. ಸದ್ಯ ನಾಯಕ ಮಂದೀಪ್‌ ಸಿಂಗ್‌ 15 ಮತ್ತು ನೆಹಲ್‌ ವದೇರಾ 9 ಆಟವಾಡುತ್ತಿದ್ದಾರೆ. ಅಂತಿಮವಾಗಿ ಮೂರನೇ ದಿನದಾಟಕ್ಕೆ 68 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು 238 ರನ್‌ ಗಳಿಸಿ, ನಾಲ್ಕನೇ ದಿನಕ್ಕೆ ಆಟ ಕಾಯ್ದಿರಿಸಿದೆ. ಇದರೊಂದಿಗೆ ಕರ್ನಾಟಕ 124 ರನ್‌ ಗಳ ಮುನ್ನಡೆ ಪಡೆದುಕೊಂಡಿದೆ.

ಸಂಕ್ಷಿಪ್ತ ಸ್ಕೋರ್‌:

ದಿನ 1: ಇನ್ನಿಂಗ್ಸ್ ಬ್ರೇಕ್ – ಪಂಜಾಬ್ – 152/10 (46.5 ಓವರ್‌)
ದಿನ 1: ಸ್ಟಂಪ್ಸ್ – ಕರ್ನಾಟಕ – 142/3 (33.0 ಓವರ್‌) 10 ರನ್ ಟ್ರಯಲ್, ದೇವದತ್ ಪಡಿಕ್ಕಲ್ 80 (80), ಮನೀಶ್ ಪಾಂಡೆ 13 (22)
ದಿನ 2: ಸ್ಟಂಪ್ಸ್ – ಕರ್ನಾಟಕ – 461/6 (123), ವಿಜಯ್ ಕುಮಾರ್ ವೈಶಾಕ್ 15(27), ಶ್ರೀನಿವಾಸ್ ಶರತ್ 55 (158), 309 ರನ್ ಮುನ್ನಡೆ
ದಿನ 3: ಇನ್ನಿಂಗ್ಸ್ ಬ್ರೇಕ್ – ಕರ್ನಾಟಕ – 514/8 ಡಿ (140) 362 ರನ್ ಮುನ್ನಡೆ
ದಿನ 3: ಸ್ಟಂಪ್ಸ್‌ – ಪಂಜಾಬ್ – 152 ಮತ್ತು 238/3 (68) 124 ರನ್‌ಗಳ ಹಿಂದೆ, ಮನ್‌ದೀಪ್ ಸಿಂಗ್ 15 (61), ನೆಹಾಲ್ ವಧೇರಾ 9 (35)

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ