ನವದೆಹಲಿ: 17ನೇ ಆವೃತ್ತಿಯ ಟಿ20 ವಿಶ್ವಕಪ್ ಗೆಲ್ಲುವ ಮೂಲಕ ದಶಕಗಳ ಕಪ್ ಬರ ನೀಗಿಸಿದ ಭಾರತ ತಂಡಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಭಿನಂದನೆ ಸಲ್ಲಿಸಿದ್ದಾರೆ.
ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಒಂದನ್ನು ಮಾಡಿರುವ ರಾಗಾ, ಟೂರ್ನಮೆಂಟ್‌ನಾದ್ಯಂತ ಅದ್ಭುತವಾದ ವಿಶ್ವಕಪ್ ವಿಜಯ ಮತ್ತು ಅದ್ಭುತ ಪ್ರದರ್ಶನಕ್ಕಾಗಿ ಟೀಮ್ ಇಂಡಿಯಾಕ್ಕೆ ಅಭಿನಂದನೆಗಳು!
ಸೂರ್ಯ, ಎಂತಹ ಅದ್ಭುತ ಕ್ಯಾಚ್! ರೋಹಿತ್, ಈ ಗೆಲುವು ನಿಮ್ಮ ನಾಯಕತ್ವಕ್ಕೆ ಸಾಕ್ಷಿ. ರಾಹುಲ್, ಟೀಮ್ ಇಂಡಿಯಾ ನಿಮ್ಮ ಮಾರ್ಗದರ್ಶನವನ್ನು ಕಳೆದುಕೊಳ್ಳುತ್ತದೆ ಎಂದು ನನಗೆ ತಿಳಿದಿದೆ. ಅದ್ಭುತವಾದ ಮೆನ್ ಇನ್ ಬ್ಲೂ ನಮ್ಮ ದೇಶಕ್ಕೆ ಹೆಮ್ಮೆ ತಂದಿದೆ ಎಂದು ಬರೆದುಕೊಂಡಿದ್ದಾರೆ.
ಹಾಗೆಯೇ ವಿರಾಟ್ ಕೊಹ್ಲಿ ನಿವೃತ್ತಿ ಬಗ್ಗೆಯೋ ಫೊಸ್ಟ್ ಮಾಡಿರುವ ರಾಗಾ, ನಿಮ್ಮ ಅತ್ಯದ್ಬುತವಾದ ಟಿ20 ವೃತ್ತಿ ಜೀವನಕ್ಕೆ ಅಭಿನಂದನೆಗಳು. ನೀವು ನಿಜವಾಗಿಯೂ ಭವ್ಯವಾದ ಶೈಲಿಯಲ್ಲಿ ಸೈನ್ ಆಫ್ ಮಾಡುತ್ತಿದ್ದೀರಿ ಎಂದು ವಿರಾಟ್‌ಗೆ ಶುಭ ಕೋರಿದ್ದಾರೆ.