ಪ್ಯಾರಿಸ್: ವಿಶ್ವವಿಖ್ಯಾತ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಬ್ಯಾಡ್ಮಿಂಟನ್ ವಿಭಾಗದಲ್ಲಿ ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು ಅವರು ಮೊದಲ ಗೆಲುವು ದಾಖಲಿಸಿದ್ದಾರೆ.
ಬ್ಯಾಡ್ಮಿಂಟನ್ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ತಮ್ಮ ಮೊದಲ ಪಂದ್ಯದಲ್ಲಿ ಮಾಲ್ಡೀವ್ಸ್‌ನ ಎಫ್.ಎನ್ ಅಬ್ದುಲ್ ರಝಾಕ್ ಅವರ ವಿರುದ್ಧ ನೇರ ಸೆಟ್‌ಗಳಿಂದ ಗೆದ್ದ ಪಿವಿ ಸಿಂಧೂ ಈ ಕ್ರೀಡಾಕೂಟದಲ್ಲಿ ಶುಭಾರಂಭ ಮಾಡಿದರು.
ಆರಂಭದಿಂದಲೇ ಆಕ್ರಮಣಕಾರಿ ಆಟದ ಮೂಲಕ ಪಂದ್ಯವನ್ನು ತನ್ನತ್ತ ವಾಲಿಸಿಕೊಂಡ ಸಿಂಧು ಮೊದಲೆರೆಡು ಸೆಟ್‌ಗಳಲ್ಲಿ 21-9 21-6 ಮೂಲಕ ಎದುರಾಲಿಯನ್ನು ಬಗ್ಗು ಬಡಿದು ಮುಂದಿನ ಸುತ್ತಿಗೆ ಆಯ್ಕೆಯಾದರು.
ಜುಲೈ. 31ರ ಬುಧವಾರದಂದು ಪಿವಿ ಸಿಂಧೂ ಎಸ್ಟೋನಿಯಾದ ಕ್ರಿಸ್ಟಿನ್ ಕೂಬಾ ಅವರ ವಿರದ್ಧ ಸೆಣೆಸಾಡಲಿದ್ದಾರೆ.





