ಬೆಂಗಳೂರು : 9ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ಗೆ ಶುಕ್ರವಾರ ಚಾಲನೆ ದೊರೆಯಲಿದ್ದು, ಭಾರತ ಸೇರಿ ಹಲವು ದೇಶಗಳ ಯುವ, ಪ್ರತಿಭಾನ್ವಿತ ಹಾಗೂ ಅನುಭವಿ ಕಬಡ್ಡಿ ಪಟುಗಳು ಅಂಕಣಕ್ಕಿಳಿಯಲಿದ್ದಾರೆ. ಈ ಹಿಂದಿನಂತೆಯೇ 12 ತಂಡಗಳು ಪ್ರಶಸ್ತಿಗಾಗಿ ಸೆಣಸಲಿದ್ದು, ಭರ್ಜರಿ ಮೂರು ತಿಂಗಳುಗಳ ಕಾಲ ಪಂದ್ಯಾವಳಿ ನಡೆಯಲಿದೆ.
ಲೀಗ್ ಹಂತದ 132 ಪಂದ್ಯಗಳಿಗೆ ಬೆಂಗಳೂರು, ಪುಣೆ ಹಾಗೂ ಹೈದರಾಬಾದ್ ಆತಿಥ್ಯ ವಹಿಸಲಿವೆ. ಮೊದಲ 41 ಪಂದ್ಯಗಳು ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿವೆ. ಆ ಬಳಿಕ ಪುಣೆ ನಂತರ ಹೈದರಾಬಾದ್‌ಗೆ ಲೀಗ್ ಸ್ಥಳಾಂತರಗೊಳ್ಳಲಿದೆ. ಲೀಗ್ ಮುಕ್ತಾಯಕ್ಕೆ ಅಂಕಪಟ್ಟಿಯಲ್ಲಿ ಅಗ್ರ 6 ಸ್ಥಾನಗಳನ್ನು ಪಡೆಯುವ ತಂಡಗಳು ಪ್ಲೇ-ಆಫ್‌ಗೇರಲಿವೆ. ಪ್ಲೇ-ಆಫ್‌ನಲ್ಲಿ 2 ಎಲಿಮಿನೇಟರ್, 2 ಸೆಮಿಫೈನಲ್, 1 ಫೈನಲ್ ನಡೆಯಲಿದೆ.
‘ಕೋವಿಡ್ ಭೀತಿ ಕಡಿಮೆಯಾಗಿದ್ದರೂ ಸೋಂಕು ಹರಡುವಿಕೆಯ ಸಾಧ್ಯತೆಯನ್ನು ಕಡೆಗಣಿಸಲು ಆಗುವುದಿಲ್ಲ. ಹೀಗಾಗಿ ಹೆಚ್ಚು ಪ್ರಯಾಣವನ್ನು ತಡೆಯುವ ಉದ್ದೇಶದಿಂದ ಕೇವಲ 3 ನಗರಗಳಲ್ಲಿ ಲೀಗ್ ಹಂತ ನಡೆಸಲಾಗುತ್ತಿದೆ’ ಎಂದು ಲೀಗ್ ಆಯುಕ್ತ ಅನುಪಮ್ ಗೋಸ್ವಾಮಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
1⃣ day to go for #FantasticPanga to begin! 🤩
Watch #vivoProKabaddi Season 9, tomorrow LIVE 7:30 PM onwards, only on the Star Sports Network and Disney+Hotstar! 🙌 pic.twitter.com/uLGoTjhjqE
— ProKabaddi (@ProKabaddi) October 6, 2022