ಪ್ಯಾರಿಸ್: ಇಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್‌ನ ಪ್ಯಾರಾ ಬ್ಯಾಡ್ಮಿಂಟನ್ ವಿಭಾಗದಲ್ಲಿ ಭಾರತದ ಬ್ಯಾಡ್ಮಿಂಟನ್ ಪಟು ನಿತ್ಯಾಶ್ರೀ ಅವರು ಸೆಮಿ ಫೈನಲ್ಸ್‌ಗೆ ಲಗ್ಗೆಯಿಟ್ಟಿದ್ದಾರೆ.
ಬ್ಯಾಡ್ಮಿಂಟನ್‌ನ ಮಹಿಳೆಯರ ಸಿಂಗಲ್ಸ್ ಎಚ್‌ಎಚ್-6 ವಿಭಾಗದ ಕ್ವಾರ್ಟರ್ ಫೈನಲ್ಸ್‌ನಲ್ಲಿ ಪೋಲೆಂಡ್‌ನ ಒಲಿವಿಯಾ ಸ್ಮಿಗಿಲ್ ವಿರುದ್ಧ 21-4 ಮತ್ತು 21-7 ರ ಅಂತರಿದಂದ ಭರ್ಜರಿ ಗೆಲುವು ಕಂಡರು.
ಈ ಗೆಲುವಿನ ಮೂಲಕ ಸೆಮಿಸ್ ತಲುಪಿರುವ 19 ವರ್ಷದ ನಿತ್ಯಾಶ್ರೀ ಅವರು ಸೋಮವಾರ (ಸೆ.2) ರಂದು ಸೆಮಿ ಫೈನಲ್ಸ್‌ನಲ್ಲಿ ಚೀನಾದ ಲಿನ್ ಶುವಾಂಗ್ಬಾವೊ ವಿರುದ್ಧ ಸೆಣೆಸಾಡಲಿದ್ದಾರೆ.
ಮತ್ತೊಂದೆಡೆ ಬ್ಯಾಡ್ಮಿಂಟನ್ ಯುಎಸ್-5ನ ಸೆಮಿ ಫೈನಲ್ಸ್‌ನಲ್ಲಿ ಭಾರತೀಯರಿಬ್ಬರು ಮುಖಾಮುಖಿ ಆಗಲಿದ್ದು, ಒಂದು ಪದಕ ಖಚಿತವಾಗಲಿದೆ. ಈ ಪಂದ್ಯದಲ್ಲಿ ಮನೀಷಾ ರಾಮದಾಸ್ ಹಾಗೂ ಮುರುಗೇಶನ್ ತುಳಸಿಮತಿ ಅವರು ಸೋಮವಾರ (ಸೆ.2) ರಂದು ಸೆಮಿಸ್‌ನಲ್ಲಿ ಕಾದಾಟ ನಡೆಸಲಿದ್ದಾರೆ.