Mysore
17
few clouds

Social Media

ಭಾನುವಾರ, 15 ಫೆಬ್ರವರಿ 2026
Light
Dark

Paris Olympics 2024: 3ನೇ ಪದಕದ ಮೇಲೆ ಮನು ಭಾಕರ್‌ ಕಣ್ಣು

ಪ್ಯಾರಿಸ್‌: ಭಾರತದ ಸ್ಟಾರ್ ಶೂಟರ್ ಎಂದೇ ಖ್ಯಾತಿ ಪಡೆದಿರುವ ಮನು ಭಾಕರ್ ಈಗಾಗಲೇ 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಎರಡು ಕಂಚಿನ ಪದಕಗಳನ್ನು ಗೆದ್ದಿದ್ದಾರೆ. ಮಹಿಳೆಯರ ವೈಯಕ್ತಿಕ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಮೂರನೇ ಸ್ಥಾನದೊಂದಿಗೆ ಕಂಚಿನ ಪದಕ ಗೆದ್ದರೆ, ಮಿಶ್ರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲೂ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಇನ್ನು ಒಂದೇ ಆವೃತ್ತಿಯಲ್ಲಿ 3ನೇ ಪದಕದ ಮೇಲೆ ಗುರಿಯಿಟ್ಟಿದ್ದಾರೆ. ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಮನುಭಾಕರ್ 25 ಮೀಟರ್ ಪಿಸ್ತೂಲ್ ಮಹಿಳೆಯರ ಅರ್ಹತಾ ಸ್ಪರ್ಧೆಯಲ್ಲಿ ಫೈನಲ್ಸ್‌ಗೆ ಆಯ್ಕೆಯಾಗಿದ್ದಾರೆ ಈ ಮೂಲಕ 590 ಅಂಕಗಳನ್ನು ಗಳಿಸಿ 2 ನೇ ಸ್ಥಾನವನ್ನು ಅಲಂಕರಿಸಿದ್ದಾರೆ.

ಇವರೊಟ್ಟಿಗೆ ಭಾರತದ ಮತ್ತೊಬ್ಬ ಶೂಟರ್ ಇಶಾ ಸಿಂಗ್ ಅವರು 581 ಅಂಕಗಳಿಸಿ 18 ನೇ ಸ್ಥಾನಗಳಿಸಿದ್ದಾರೆ ಇನ್ನು ಶನಿವಾರ ನಡೆಯಲಿರುವ ಪಂದ್ಯದಲ್ಲಿ ಮನುಭಾಕರ್ ಫೈನಲ್ಸ್ ಆಡಲಿದ್ದು, ಪದಕವನ್ನು ತಮ್ಮದಾಗಿಸಿಕೊಳ್ಳುವ ಆಸೆಯಲ್ಲಿದ್ದಾರೆ.

Tags:
error: Content is protected !!