ಪ್ಯಾರಿಸ್: ಪ್ಯಾರಿಸ್ ಒಲಂಪಿಕ್ಸ್ 2024ರ ಹಾಕಿ ಟೂರ್ನಿಯಲ್ಲಿ ಅತ್ಯದ್ಭುತ ಪ್ರದರ್ಶನ ತೋರುತ್ತಿರುವ ಭಾರತ ತಂಡ ಇಂದಿನ (ಆ.4) ಪಂದ್ಯದಲ್ಲಿ ಗ್ರೇಟ್ ಬ್ರಿಟನ್ ಮಣಿಸುವ ಮೂಲಕ ಸೆಮಿಸ್‌ಗೆ ಎಂಟ್ರಿ ಕೊಟ್ಟಿದೆ.
ಭಾನುವಾರ ನಡೆದ ಪ್ಯಾರಿಸ್ ಒಲಿಂಪಿಕ್ಸ್‌ನ ಪುರುಷರ ಹಾಕಿ ಪಂದ್ಯಾವಳಿಯ ಸೆಮಿಫೈನಲ್‌ಗೆ ಪ್ರವೇಶಿಸಲು ಭಾರತವು ಗ್ರೇಟ್ ಬ್ರಿಟನ್‌ನನ್ನು ಪೆನಾಲ್ಟಿ ಶೂಟೌಟ್‌ನಲ್ಲಿ 4-2 ಗೋಲುಗಳಿಂದ ಸೋಲಿಸಿ ಸೆಮಿ ಫೈನಲ್ಸ್‌ಗೆ ಲಗ್ಗೆಯಿಟ್ಟಿತು.
40 ನಿಮಿಷಗಳಿಗಿಂತ ಹೆಚ್ಚು ಕಾಲ ನಡೆದ ಈ ಗೇಮ್ಸ್‌ನಲ್ಲಿ ಭಾರತದ ಆಟಗಾರರು ಕೇವಲ ಹತ್ತು ಜನರು ಮಾತ್ರ ಆಡಿದ್ದರು. ಗ್ರೇಟ್ ಬ್ರಿಟನ್ ಆಟಗಾರನ ವಿರುದ್ಧ ಸ್ಟಿಕ್ ಎತ್ತಿದ್ದಕ್ಕಾಗಿ ಅಮಿತ್ ರೋಹಿದಾಸ್ ರೆಡ್ ಕಾರ್ಡ್ ತೋರಿಸಿದ ನಂತರ ಭಾರತ ತಂಡದಲ್ಲಿ 10 ಜನ ಮಾತ್ರ ಪಂದ್ಯವನ್ನು ಆಡಿದರು.
ತಮ್ಮ ಕೊನೆಯ ಅಂತರಾಷ್ಟ್ರೀಯ ಪಂದ್ಯಾವಳಿಯನ್ನು ಆಡುತ್ತಿರುವ ಹಿರಿಯ ಆಟಗಾರ ಪಿಆರ್ ಶ್ರೀಜೇಶ್, ಬಲಿಷ್ಠ ಬ್ರಿಟನ್ ಹೊಡೆತಗಳನ್ನು ಸಮರ್ಥವಾಗಿ ತಡೆಯುವ ಮೂಲಕ ತಂಡಕ್ಕೆ ಆಸರೆಯಾದರು.
22ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ನಿಂದ ಹರ್ಮನ್‌ಪ್ರೀತ್ ಸಿಂಗ್ ಅವರ ಗೋಲ್ ಮೂಲಕ ಮುನ್ನಡೆ ಭಾರತ ಮೊದಲ ಮುನ್ನಡೆ ಸಾಧಿಸಿದರೇ, ಇದಕ್ಕೆ ಉತ್ತರವಾಗಿ 27ನೇ ನಿಮಿಷದಲ್ಲಿ ಲೀ ಮಾರ್ಟನ್ ಮೂಲಕ ಗ್ರೇಟ್ ಬ್ರಿಟನ್ ಸಮಬಲ ಸಾಧಿಸಿತು.
ಇದಾದ ಬಳಿಕ ಕೊನೆಗೆ ಪೆನಾಲ್ಟಿ ಶೂಟ್‌ಔಟ್‌ಗೆ ಪಂದ್ಯ ವಾಲಿತು. ಇದರಲ್ಲಿ ಸಮರ್ಥವಾಗಿ ಆಡಿದ ಭಾರತ 4-2 ಗೋಲುಗಳಿಂದ ಬ್ರಿಟನ್ ಸೋಲಿಸಿ ಸೆಮಿಸ್ ತಲುಪಿತು.