Mysore
26
scattered clouds

Social Media

ಬುಧವಾರ, 15 ಜನವರಿ 2025
Light
Dark

Paris Olympics 2024: ದೀಪಿಕಾಗೆ ಸೋಲು; ಆರ್ಚರಿ ಅಭಿಯಾನ ಮುಗಿಸಿದ ಭಾರತ

ಪ್ಯಾರಿಸ್‌: ಭಾರತದ ಅನುಭವಿ ಬಿಲ್ಲುಗಾರ್ತಿ ದೀಪಿಕಾ ಕುಮಾರಿ ಅವರು ಕ್ವಾರ್ಟರ್‌ ಫೈನಲ್ಸ್‌ನಲ್ಲಿ ಕೊರಿಯಾ ಆಟಗಾರ್ತಿ ಮುಂದೆ ಶರಣಾಗುವ ಮೂಲಕ ಒಲಂಪಿಕ್ಸ್‌ ಅಭಿಯಾನವನ್ನು ಅಂತಿಮಗೊಳಿಸಿದ್ದಾರೆ. ಆ ಮೂಲಕ ಆರ್ಚರಿ ಅಭಿಯಾನ ಇಲ್ಲಿಗೆ ಅಂತ್ಯವಾಗಿದೆ.

ಕೊರಿಯಾದ ಸಯಾನ್‌ ನಾಮ್‌ ವಿರುದ್ಧ 6-4ರ ಅಂತರದಿಂದ ಸೋಲುವ ಮೂಲಕ ಪ್ರಶಸ್ತಿ ಸುತ್ತಿನಲ್ಲಿ ಎಡವಿದ್ದಾರೆ. ಮೊದಲು ಈ ಈ ಇಬ್ಬರು ಆಟಗಾರರು ಮೊದಲಿಗೆ 4-4ರ ಸಮಬಲದಲ್ಲಿ ಕಾದಾಟ ನಡೆಸುತ್ತಿದ್ದರು. ಇದಾದ ಬಳಿಕ ಪಂದ್ಯದ ಮೇಲೆ ಹಿಡಿತ ಸಾಧಿಸಿದ ನಾಮ್‌ ಮುನ್ನಡೆ ಕಾಯ್ದುಕೊಂಡು ಸೆಮಿಸ್‌ ತಲುಪಿದರು.

ಇವರ ಸೋಲಿನೊಂದಿಗೆ ಭಾರತ ಒಲಂಪಿಕ್ಸ್‌ನ ಆರ್ಚರಿ ವಿಭಾಗದ ಹೋರಾಟ ಅಂತ್ಯವಾಗಿದೆ. ಜರ್ಮನಿಯ ಮಿಷೆನ್‌ ಕ್ರೊಪ್ಟೆನ್‌ ಅವರನ್ನು 6-4 ಅಂತರದಿಂದ ಸೋಲಿಸಿದ ದೀಪಿಕಾ ಕ್ವಾರ್ಟರ್ಸ್‌ಗೆ ಲಗ್ಗೆಯಿಟ್ಟಿದ್ದರು. ಕ್ವಾರ್ಟರ್ಸ್‌ನಲ್ಲಿ ಕೊರಿಯಾದ 19 ವರ್ಷದ ನಾಮ್‌ ವಿರುದ್ಧ ಸೋಲು ಕಂಡು ಹೊರಬಂದಿದ್ದಾರೆ.

Tags: