ನವದೆಹಲಿ : ಮುಂದಿನ ತಿಂಗಳು ನಡೆಯುವ ಭಾರತೀಯ ಒಲಂಪಿಕ್ ಅಸೋಸಿಯೇಷನ್ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಓಟಗಾರ್ತಿ ಪಿಟಿ ಉಷಾ ಅವರು ಸ್ಪರ್ಧಿಸುವುದಾಗಿ ಘೋಷಣೆ ಮಾಡಿದ್ದಾರೆ.
With the warm support of my Fellow Athletes and National Federations I am humbled and honoured to accept and file for the Nomination of the President Of IOA!
— P.T. USHA (@PTUshaOfficial) November 26, 2022
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ನನ್ನ ಸಹ ಕ್ರೀಡಾಪಟುಗಳು ಮತ್ತು ರಾಷ್ಟ್ರೀಯ ಒಕ್ಕೂಟಗಳ ಆತ್ಮೀಯರು ನನ್ನನ್ನು ಬೆಂಬಲಿಸಿದ್ದಾರೆ. ಹೀಗಾಗಿ ನಾನು ಅವರ ನಾಮನಿರ್ದೇಶವನ್ನು ವಿನಮ್ರದಿಂದ ಗೌರವಿಸಿ ಒಲಿಂಪಿಕ್ ಸಂಸ್ಥೆಯ ಅಧ್ಯಕ್ಷ ಸ್ಥಾನದ ಚುನಾವಣಾ ಕಣಕ್ಕೆ ಧುಮುಕುವೆ ಎಂದು ಹೇಳಿದ್ದಾರೆ.
ಡಿಸೆಂಬರ್ 10 ರಂದು ಐಒಎಗೆ ಚುನಾವಣೆ ಘೋಷಿಸಲಾಗಿದೆ. ಭಾನುವಾರ(ನವೆಂಬರ್ 27) ನಾಮಪತ್ರ ಸಲ್ಲಿಸುವ ಅಂತಿಮ ದಿನವಾಗಿದೆ.