ಮುಂಬೈ: ಮುಂಬೈಯಲ್ಲಿ ನಡೆದ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಸಭೆಯು 2028 ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ (ಟಿ20) ಸಹಿತ ಬೇಸ್‌ಬಾಲ್/ಸಾಫ್ಟ್‌ಬಾಲ್, ಫ್ಲ್ಯಾಗ್ ಫುಟ್ಬಾಲ್, ಲ್ಯಾಕ್ರೋಸ್ (ಸಿಕ್ಸಸ್) ಮತ್ತು ಸ್ಕ್ವಾಶ್ ಸೇರಿಸಲು ಅನುಮತಿಸಿದೆ. ಇಬ್ಬರು ಸಮಿತಿ ಸದಸ್ಯರು ಈ ಪ್ರಸ್ತಾವನೆಗೆ ವಿರೋದಿಸಿದ್ದರೆ ಒಬ್ಬ ಸದಸ್ಯರು ಮತದಾನದಿಂದ ದೂರವಿದ್ದರು.
ಒಲಿಂಪಿಕ್ಸ್ ಗೇಮ್ಸ್ ಲಾಸ್ ಏಂಜಲೀಸ್ 2028ರ ಆಯೋಜನಾ ಸಮಿತಿಯ ಪ್ರಸ್ತಾವನೆಯನ್ನು ಸಭೆಯಲ್ಲಿ ಅನುಮೋದಿಸಲಾಗಿದೆ ಎಂದು ಮಾಹಿತಿ ನೀಡಲಾಗಿದೆ.
ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಈ ಹಿಂದೆ 1900 ರಲ್ಲಿ ಪ್ಯಾರಿಸ್ ಗೇಮ್ಸ್‌ನಲ್ಲಿ ಒಮ್ಮೆ ಮಾತ್ರ ಕ್ರಿಕೆಟ್ ಸೇರ್ಪಡೆಗೊಂಡಿತ್ತು. ಲಾಸ್ ಏಂಜಲೀಸ್ 2028 ಒಲಿಂಪಿಕ್ಸ್ ಭಾಗವಾಗಿ ಪುರುಷರು ಮತ್ತು ಮಹಿಳೆಯರಿಗೆ ತಲಾ ಆರು ಟಿ20 ತಂಡಗಳನ್ನು ಹೊಂದುವ ಉದ್ದೇಶವಿದೆ.