Mysore
20
overcast clouds
Light
Dark

ಏಕದಿನ ವಿಶ್ವಕಪ್: 246ರನ್‌ ಗಳಿಗೆ ಬಾಂಗ್ಲಾವನ್ನು ಕಟ್ಟಿ ಹಾಕಿದ ಕೇನ್‌ ಪಡೆ

ಚೆನ್ನೈ : ಇಲ್ಲಿನ ಎಂಎ ಚಿದಂಬರಂ ಅಂತರಾಷ್ಟ್ರೀಯ ಸ್ಟೇಡಿಯಂ ನಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ 2023 ಟೂರ್ನಿಯ 11 ನೇ ಪಂದ್ಯದಲ್ಲಿ ಬಾಂಗ್ಲಾದೇಶ ನ್ಯೂಝಿಲ್ಯಾಂಡ್ ಗೆ 246 ರನ್ ಗಳ ಗುರಿ ನೀಡಿದೆ.

ನ್ಯೂಝಿಲ್ಯಾಂಡ್ ವಿರುದ್ಧ ಟಾಸ್ ಸೋತ ಬಾಂಗ್ಲಾದೇಶ ಬ್ಯಾಟಿಂಗ್ ಗೆ ಇಳಿಯಿತು. ಬಾಂಗ್ಲಾ ಬ್ಯಾಟರ್ಸ್ ತಂಡಕ್ಕೆ ಉತ್ತಮ ಆರಂಭ ಹಾಕಿಕೊಡುವಲ್ಲಿ ವಿಫಲರಾದರು.ಆರಂಭಿಕ ಬ್ಯಾಟರ್ ಲಿಟನ್ ದಾಸ್ ಇನ್ನಿಂಗ್ಸ್ ನ ಮೊದಲ ಎಸೆತದಲ್ಲಿಯೇ ಗೋಲ್ಡನ್ ಡಕ್ ಅಗಿ ಟ್ರೆಂಟ್ ಬೋಲ್ಟ್ ಗೆ ವಿಕೆಟ್ ಒಪ್ಪಿಸಿದರು. ಎರಡನೇ ಕ್ರಮಾಂಕದ ತಂಝೀದ್ ಹಸನ್ ಕೇವಲ 16 ರನ್ ಗೆ ಲೋಕಿ ಫರ್ಗ್ಯುಸನ್ ಗೆ ವಿಕೆಟ್ ನೀಡಿದರು. ಮೆಹಿದಿ ಹಸನ್ 30 ರನ್ ಗಳಿಸಿದರೆ ಶಾಂಟೋ 7 ರನ್ ಗಳಿಸಿ ನಿರಾಶೆ ಮೂಡಿಸಿದರು.

ಜವಾಬ್ದಾರಿಯುತ ಆಟ ಆಡುತ್ತಿದ್ದ ನಾಯಕ ಶಾಕಿಬ್ ಉಲ್ ಹಸನ್ 3 ಬೌಂಡರಿ 2 ಸಿಕ್ಸರ್ ಸಹಿತ 40 ಬಾರಿಸಿ ತಂಡಕ್ಕೆ ಉತ್ತಮ ಮೊತ್ತ ಹಾಕುವ ಯೋಜನೆಯಲ್ಲಿದ್ದರು. ಆದರೆ ಲೋಕಿ ಫರ್ಗ್ಯುಸನ್ ಬೌಲಿಂಗ್ ನಲ್ಲಿ ವಿಕೆಟ್ ಕೀಪರ್ ಟಾಮ್ ಲಾಥಮ್ ಗೆ ವಿಕೆಟ್ ನೀಡಿ ಔಟ್ ಆದರು. ಬಾಂಗ್ಲಾ ಅನುಭವಿ ಬ್ಯಾಟರ್ ಮುಷ್ಫಿಕುರ್ ರಹೀಮ್ 6 ಬೌಂಡರಿ 2 ಸಹಿತ 66 ರನ್ ಗಳಿಸಿ ಇನ್ನಿಂಗ್ಸ್ ನ ಮೊದಲ ಅರ್ಧಶತಕ ದಾಖಲಿಸುವಲ್ಲಿ ಯಶಸ್ವಿಯಾದರು. ಬಳಿಕ ಬಂದ ಯಾವೊಬ್ಬ ಬ್ಯಾಟರ್ ಕೂಡ ಬಲಿಷ್ಠ ನ್ಯೂಝಿಲ್ಯಾಂಡ್ ಬೌಲಿಂಗ್ ನಲ್ಲಿ ಹೆಚ್ಚು ಹೊತ್ತು ನಿಲ್ಲಲಾಗಲಿಲ್ಲ.

ತೌಹೀದ್ ಹೃದೊಯ್, ತಸ್ಕಿನ್ ಅಹ್ಮದ್, ಮುಸ್ತಫಿಜುರ್ ಕ್ರಮವಾಗಿ 13, 17,4 ಗಳಿಸಿ ವಿಕೆಟ್ ಒಪ್ಪಿಸಿದರು. ಕೊನೆಗೆ ಬಾಂಗ್ಲಾ ಪರ 2 ಬೌಂಡರಿ 2 ಸಿಕ್ಸರ್ ಸಹಿತ 41 ಸಿಡಿಸಿದ ಮುಹಮದುಲ್ಲಾ ತಂಡದ ಮೊತ್ತ ಹೆಚ್ಚಿಸಿದರು.

ನ್ಯೂಝಿಲ್ಯಾಂಡ್ ಪರ ಉತ್ತಮ ಪ್ರದರ್ಶನ ನೀಡಿದ ಲೋಕಿ ಫರ್ಗ್ಯುಸನ್ ಪ್ರಮುಖ 3 ವಿಕೆಟ್ ಕಬಳಿಸಿದರೆ ಮಾಟ್ ಹೆನ್ರಿ ಹಾಗೂ ಟ್ರೆಂಟ್ ಬೋಲ್ಟ್ 2 ವಿಕೆಟ್ ಕಿತ್ತರು. ಗ್ಲೇನ್ ಪಿಲಿಪ್ಸ್ , ಸಾಂಟ್ನರ್ ತಲಾ ಒಂದೊಂದು ವಿಕೆಟ್ ಹಂಚಿಕೊಂಡರು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ