Mysore
17
few clouds

Social Media

ಭಾನುವಾರ, 21 ಡಿಸೆಂಬರ್ 2025
Light
Dark

ಏಕದಿನ ವಿಶ್ವಕಪ್: ಆಸ್ಟ್ರೇಲಿಯಾವನ್ನು 199 ರನ್‌ಗಳಿಗೆ ಆಲೌಟ್ ಮಾಡಿದ ಭಾರತ!

ಚೆನ್ನೈ: ಭಾರತ ಬೌಲಿಂಗ್‌ನನ್ನು ಎದುರಿಸುವಲ್ಲಿ ವಿಫಲರಾದ ಆಸ್ಟ್ರಲಿಯಾ ತಂಡ ವಿಶ್ವಕಪ್ ಅಭಿಯಾನದಲ್ಲಿ ಕಳಪೆ ಬ್ಯಾಟಿಂಗ್ ಮೂಲಕ ಎಡವಿದೆ. ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ 199 ರನ್ ಗಳಿಸಿ ಆಲೌಟ್ ಆಯಿತು. ಭಾರತದ ಪರ ರವೀಂದ್ರ ಜಡೇಜಾ ಗರಿಷ್ಠ 3 ವಿಕೆಟ್ ಪಡೆದಿದ್ದಾರೆ. ಆಸ್ಟ್ರೇಲಿಯಾದ ಒಬ್ಬ ಬ್ಯಾಟ್ಸ್‌ಮನ್ ಕೂಡ ಅರ್ಧಶತಕ ಗಳಿಸಲು ಸಾಧ್ಯವಾಗಲಿಲ್ಲ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಆಸ್ಟ್ರೇಲಿಯಾ ಭಾರತದ ಸಂಘಟಿದ ಬೌಲಿಂಗ್‌ ದಾಳಿಗೆ ನಲುಗಿ ಹೋಯಿತು. ಬುಮ್ರಾ ಭಾರತಕ್ಕೆ ಮೊದಲ ಯಶಸ್ಸನ್ನು ನೀಡಿದರು. ಬುಮ್ರಾ ಮಿಚೆಲ್ ಮಾರ್ಷ್ ಅವರನ್ನು ಶೂನ್ಯಕ್ಕೆ ಔಟ್ ಮಾಡಿದರು. ಇಲ್ಲಿಂದ ಡೇವಿಡ್ ವಾರ್ನರ್ ಮತ್ತು ಸ್ಟೀವ್ ಸ್ಮಿತ್ ಅರ್ಧಶತಕದ ಜೊತೆಯಾಟವಾಡಿದರು.

ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದ ವಾರ್ನರ್ 41 ರನ್‌ ಗಳಿಸಿದ್ದಾಗ ಕುಲದೀಪ್ ಯಾದವ್‌ಗೆ ಬಲಿಯಾದರು. ಅವರ ನಂತರ, ಸ್ಟೀವ್ ಸ್ಮಿತ್ ಅವರನ್ನು ಜಡೇಜಾ 46 ರನ್‌ಗಳಿಗೆ ಔಟ್ ಮಾಡಿದರು. ಲಬುಸ್ಚಾಗ್ನೆ 27 ರನ್‌ ಗಳಿಸಿದ್ದಾಗ ರವೀಂದ್ರ ಜಡೇಜಾ ಅವರ ಎಸೆತದಲ್ಲಿ ಹೊರನಡೆದರು. ಅಲೆಕ್ಸ್ ಕ್ಯಾರಿಯನ್ನೂ ಜಡೇಜಾ ಖಾತೆ ತೆರೆಯದೆ ವಾಪಸ್ ಕಳುಹಿಸಿದರು.

ಕುಲದೀಪ್ ಯಾದವ್ ಮತ್ತೊಮ್ಮೆ 15 ರನ್ ಗಳಿಸಿದ್ದ ಮ್ಯಾಕ್ಸ್ ವೆಲ್ ರನ್ನು ಔಟ್ ಮಾಡಿದರು. ಇದಾದ ನಂತರ ಅಶ್ವಿನ್ 8 ರನ್ ಬಾರಿಸಿದ್ದ ಕ್ಯಾಮರಾನ್ ಗ್ರೀನ್ ಅವರನ್ನು ಔಟ್ ಮಾಡಿದರು.  ಒಟ್ಟಾರೆ ಆಸ್ಟ್ರೇಲಿಯಾ 49.3 ಓವರ್ ನಲ್ಲಿ 199ಕ್ಕೆ ಆಲೌಟ್ ಆಯಿತು. ಭಾರತದ ಪರ ಜಡೇಜಾ ಗರಿಷ್ಠ 3 ವಿಕೆಟ್ ಪಡೆದರು. ಕುಲದೀಪ್ 2 ವಿಕೆಟ್ ಪಡೆದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!