Mysore
34
scattered clouds

Social Media

ಗುರುವಾರ, 27 ಮಾರ್ಚ್ 2025
Light
Dark

ಮಂಗಳೂರಿಗೆ ಸೋಲುಣಿಸಿದ ಶಿವಮೊಗ್ಗ ಸ್ಟ್ರೈಕರ್ಸ್‌

ಬೆಂಗಳೂರು : ಮೊದಲ ಬಾರಿಗೆ ಬೌಲಿಂಗ್‌ ಮತ್ತು ಬ್ಯಾಟಿಂಗ್‌ನಲ್ಲಿ ಮಿಂಚಿದ ಶಿವಮೊಗ್ಗ ಸ್ಟ್ರೈಕರ್ಸ್‌ ತಂಡ ಮಹಾರಾಜ ಟ್ರೋಫಿಯಲ್ಲಿ ಮಂಗಳೂರು ಯುನೈಟೆಡ್‌ ವಿರುದ್ಧ 8 ವಿಕೆಟ್‌ ಅಂತರದಲ್ಲಿ ಜಯ ಗಳಿಸಿದೆ.
ನಾಯಕ ಕೃಷ್ಣಪ್ಪ ಗೌತಮ್‌ (72) ಹಾಗೂ ಸ್ಟಾಲಿನ್‌ ಹೂವರ್‌ (53*) ಅವರ ಆರ್ಕಷಕ ಅರ್ಧ ಶತದಕ ನೆರವಿನಿಂದ ಶಿವಮೊಗ್ಗ 137 ರನ್‌ಗಳ ಜಯದ ಗುರಿಯನ್ನು ಇನ್ನೂ 46 ಎಸೆತಗಳು ಬಾಕಿ ಇರುವಾಗಲೇ ಕೇವಲ 2 ವಿಕೆಟ್‌ ಕಳೆದುಕೊಂಡು ತಲುಪಿತು. ಈಗಾಗಲೇ ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಶಿವಮೊಗ್ಗಕ್ಕೆ ಈ ಜಯ ಆತ್ಮವಿಶ್ವಾಸವನ್ನು ಹೆಚ್ಚಿಸಿತೇ ಹೊರತು, ಅಂಕಪಟ್ಟಿಯಲ್ಲಿ ಯಾವುದೇ ಬದಲಾವಣೆಯನ್ನುಂಟು ಮಾಡಲಿಲ್ಲ.
ನಾಯಕನ ಜವಾಬ್ದಾರಿಯುತ ಆಟ ಪ್ರದರ್ಶಿಸಿದ ಗೌತಮ್‌ ಅವರ ಇನ್ನಿಂಗ್ಸ್‌ನಲ್ಲಿ 7 ಬೌಂಡರಿ ಹಾಗೂ 4 ಸಿಕ್ಸರ್‌ ಸೇರಿತ್ತು. ಸ್ಟಾಲಿನ್‌ ಹೂವರ್‌ ಕೇವಲ 35 ಎಸೆತಗಳನ್ನು ಎದುರಿಸಿ 3 ಬೌಂಡರಿ ಹಾಗೂ 4 ಸಿಕ್ಸರ್‌ ನೆರವಿನಿಂದ ಅಜೇಯ 53 ರನ್‌ ಗಳಿಸಿದರು. ಕೃಷ್ಣಪ್ಪ ಗೌತಮ್‌ ಹಾಗೂ ಹೂವರ್‌ 131 ರನ್‌ ಜೊತೆಯಾಟವಾಡಿದರು.
ಅಲ್ಪ ಮೊತ್ತಕ್ಕೆ ತೃಪ್ತಿಪಟ್ಟ ಮಂಗಳೂರು ನಾಯಕ ಕೃಷ್ಣಪ್ಪ ಗೌತಮ್‌ ಅವರ ಬೌಲಿಂಗ್‌ ದಾಳಿಗೆ ಸಿಲುಕಿದ ಮಂಗಳೂರು ಯುನೈಟೆಡ್‌ ಕೇವಲ 136 ರನ್‌ ಗಳಿಸಿದೆ. ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ದುಕೊಂಡ ಶಿವಮೊಗ್ಗ ಸ್ಟ್ರೈಕರ್ಸ್‌, ನಿಕಿನ್‌ ಜೋಸ್‌ (38) ಹಾಗೂ ಅಭಿನವ್‌ ಮನೋಹರ್‌
[6:23 pm, 20/08/2022] +91 97315 62967: ಬೃಹತ್ ಬೆಂಗಳೂರು ಮಹಾನಗರ

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ