Mysore
24
mist

Social Media

ಗುರುವಾರ, 12 ಡಿಸೆಂಬರ್ 2024
Light
Dark

Paris Olympics 2024: ಬಾಕ್ಸಿಂಗ್‌ ರೇಸ್‌ನಿಂದ ಹೊರಬಿದ್ದ ಲವ್ಲಿನಾ

ಪ್ಯಾರಿಸ್‌: ಮಹಿಳೆಯರ 75 ಕೆಜಿ ವಿಭಾಗದ ಬಾಕ್ಸಿಂಗ್‌ ಸ್ಪರ್ಧೆಯಿಂದ ಭಾರತದ ಖ್ಯಾತ ಬಾಕ್ಸರ್‌ಪಟು ಲವ್ಲಿನಾ ಬೊರ್ಗೊಹೈನ್‌ ಅವರು ಹೊರಬಿದ್ದಿದ್ದಾರೆ.

ಪ್ಯಾರಿಸ್‌ ಒಲಂಪಿಕ್ಸ್‌ನಲ್ಲಿ ಚೀನಾದ ಲಿ ಕ್ವಿಯಾನ್‌ ವಿರುದ್ಧ 4-1 ಅಂತರದಿಂದ ಕ್ವಾರ್ಟರ್‌ ಪಂದ್ಯ ಸೋಲುವ ಮೂಲಕ ಪ್ರಶಸ್ತಿ ಗೆಲ್ಲುವ ಅವಕಾಶ ಕೈ ಚೆಲ್ಲುವ ಮೂಲಕ ತಮ್ಮ ಅಭಿಯಾನವನ್ನು ಅಂತ್ಯಗೊಳಿಸಿದ್ದಾರೆ.

2021ರ ಟೊಕಿಯೊ ಒಲಂಪಿಕ್ಸ್‌ನಲ್ಲಿ ಲವ್ಲಿನಾ ಅವರು ಕಂಚಿಕೆ ಕೊರಳೊಡ್ಡಿದ್ದರು. ಈ ಬಾರಿಯೂ ಪದಕದ ನಿರೀಕ್ಷೆ ಹುಟ್ಟಿಸಿದ್ದ ಲವ್ಲಿನಾ ಅವರು ನಿರಾಸೆ ಮೂಡಿಸಿದರು.

 

Tags: