Mysore
26
overcast clouds

Social Media

ಶನಿವಾರ, 19 ಸೆಪ್ಟೆಂಬರ್ 2026
Light
Dark

Paris Olympics 2024: ಬ್ಯಾಡ್ಮಿಂಟನ್‌ ಸೆಮಿಸ್‌ನಲ್ಲಿ ಸೋತ ಸೇನ್‌; ಕಂಚಿನ ನಿರೀಕ್ಷೆ?

ಪ್ಯಾರಿಸ್‌: ತೀವ್ರ ಪೈಪೋಟಿ ನೀಡುವ ಮೂಲಕ ಫೈನಲ್ಸ್‌ಗೆ ಲಗ್ಗೆಯಿಡುವ ನಿರೀಕ್ಷೆ ಹುಟ್ಟಿಸಿದ್ದ ಲಕ್ಷ್ಯಾ ಸೇನ್‌ ಸೆಮಿಸ್‌ನಲ್ಲಿ ಎಡಿದ್ದಾರೆ.

ಹಾಲಿ ಚಾಂಪಿಯನ್‌ ವಿಕ್ಟರ್‌ ಅಕ್ಸಲ್ಸೆನ್‌ ವಿರುದ್ಧ 22-20, 21-14 ಅಂತರದಿಂದ ಸೋಲು ಕಂಡರು. ಮೊದಲ ಸುತ್ತಿನಲ್ಲಿ ತೀವ್ರ ಮುನ್ನಡೆ ಪಡೆದಿದ್ದ ಸೇನ್‌ ನಂತರ ವಿಕ್ಟರ್‌ ಏಟಿಗೆ ದಂಗಾದರು. ಬಳಿಕ ಎರಡನೇ ಸುತ್ತಿನಲ್ಲಿ ಮೇಲುಗೈ ಸಾಧಿಸಿದ ವಿಕ್ಟರ್‌ ಪಂದ್ಯವನ್ನು ತನ್ನತ್ತ ವಾಲಿಸಿಕೊಂಡರು.

ವಿಶ್ವ ದರ್ಜೆಯ ಆಟಗಾರ ವಿಕ್ಟರ್‌ ಚಿನ್ನಕ್ಕಾಗಿ ವಿಟಿದ್ಸರ್ನ್‌ ಜತೆ ಕಾದಾಡಲಿದ್ದಾರೆ. ಇತ್ತ ಲಕ್ಷ್ಯಾ ಸೆನ್‌ ಹಾಗೂ ಲೀ ಕಂಚಿನ ಪದಕಕ್ಕಾಗಿ ಸೆಣೆಸಾಡಲಿದ್ದಾರೆ.

ಸೆಮಿಫೈನಲ್‌ ಸೋತ ಲಕ್ಷ್ಯ ಸೇನ್‌ಗೆ ಸಿಗುತ್ತಾ ಕಂಚು?

ನಿನ್ನೆ ನಡೆದ ಪುರುಷರ ಬ್ಯಾಡ್ಮಿಂಟನ್‌ ಸೆಮಿಫೈನಲ್‌ ಪಂದ್ಯದಲ್ಲಿ ಭಾರತದ ಲಕ್ಷ್ಯ ಸೇನ್‌ ಡೆನ್‌ಮಾರ್ಕ್‌ನ ವಿಕ್ಟರ್‌ ಅಕ್ಸೆಲ್‌ಸನ್‌ ವಿರುದ್ಧ ಸೋಲನ್ನು ಅನುಭವಿಸಿದ್ದು, ಇಂದು ಸಂಜೆ 6 ಗಂಟೆಗೆ ನಡೆಯಲಿರುವ ಪಂದ್ಯದಲ್ಲಿ ಮಲೇಷಿಯಾದ ಲೀ ಝಿ ಜಿಯಾ ವಿರುದ್ಧ ಕಂಚಿಗಾಗಿ ಸೆಣಸಾಡಲಿದ್ದಾರೆ.

Tags:
error: Content is protected !!