Mysore
22
broken clouds
Light
Dark

Paris Olympics 2024: ಬ್ಯಾಡ್ಮಿಂಟನ್‌; ಲಕ್ಷ್ಯ ಸೇನ್‌ ಕೈತಪ್ಪಿದ ಕಂಚಿನ ಪದಕ

ಪ್ಯಾರಿಸ್‌: ಪ್ಯಾರಿಸ್‌ ಒಲಂಪಿಕ್ಸ್‌ ಕ್ರೀಡಾಕೂಟದ ಬ್ಯಾಡ್ಮಿಂಟನ್‌ ಸಿಂಗಲ್ಸ್‌ ಸ್ಪರ್ಧೆಯ ಕಂಚಿನ ಪದಕಕ್ಕಾಗಿ ನಡೆದ ಹೋರಾಟದಲ್ಲಿ ಮಲೇಷಿಯಾದ ಲೀ ಜಿ ಜಿಯಾ ವಿರುದ್ಧ ಭಾರತದ ಲಕ್ಷ್ಯಾ ಸೇನ್‌ ಅವರು ಮುಗ್ಗರಿಸಿದ್ದಾರೆ. ಆ ಮೂಲಕ ಭಾರತಕ್ಕೆ ಪದಕ ನಿರೀಕ್ಷೆ ಹುಟ್ಟಿಸಿದ್ದ ಲಕ್ಷ್ಯಾ ಸೇನ್‌ ಅವರ ಪದಕ ಗುರಿ ತಪ್ಪಿದೆ.

ಮೊದಲ ಸುತ್ತಿನಲ್ಲಿ ಮೇಲುಗೈ ಸಾಧಿಸಿದ್ದ ಸೇನ್‌ ಬಳಿಕ ನಡೆದ ಹೋರಾಟದಲ್ಲಿ ಸತತ ಎರಡು ಸುತ್ತುಗಳಲ್ಲಿ ಸೋಲು ಕಂಡರು ಆ ಮೂಲಕ ತಮ್ಮ ಅಭಿಯಾನ ಅಂತ್ಯಗೊಳಿಸಿದರು.

ಮೊದಲ ಸುತ್ತಿನಲ್ಲಿ 21-13ರ ಅಂತರದಿಂದ ಗೆದ್ದ ಸೇನ್‌, ಉಳಿದೆರೆಡು ಸೆಟ್‌ಗಳಲ್ಲಿ 21-16 ಮತ್ತು 21-11 ಮೂಲಕ ಲೀ ಜಿ ಜಿಯಾ ಅವರು ಗೆದ್ದು ಬೀಗಿದರು. ಆ ಮೂಲಕ ಕಂಚಿನ ಪದಕಕ್ಕೆ ಕೊರಳೊಡ್ಡಿದರು.