ಪ್ಯಾರಿಸ್: ಭಾರತದ ಲಕ್ಷ್ಯ ಸೇನ್ ಇಂದು ನಡೆದ ಒಲಿಂಪಿಕ್ಸ್‌ನ ಪುರುಷರ ಸಿಂಗಲ್ಸ್ ಸ್ಪರ್ಧೆಯಲ್ಲಿ ಸ್ವದೇಶದ ಪ್ರಣಯ್ ಅವರನ್ನು ನೇರ ಗೇಮ್‌ಗಳಲ್ಲಿ ಮಣಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
22 ವರ್ಷ ವಯಸ್ಸಿನ ಲಕ್ಷ್ಯ ಸೇನ್ ಅವರು ಒಲಿಂಪಿಕ್ಸ್‌ನ ಪುರುಷರ ಸಿಂಗಲ್ಸ್‌ನಲ್ಲಿ ಎಂಟರ ಘಟ್ಟ ಪ್ರವೇಶಿಸಿದ ಭಾರತದ ಮೂರನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರವಾದರು.
ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್‌ನಲ್ಲಿ ಸೇನ್ ಅವರು, 21-12, 21-6ರಿಂದ ವಿಶ್ವದ 13ನೇ ಕ್ರಮಾಂಕದ ಪ್ರಣಯ್ ಅವರನ್ನು ಸೋಲಿಸಿದರು. ನಿಖರ ಸರ್ವ್, ಅದ್ಭುತ ಫೋರ್ ಹ್ಯಾಂಡ್ ಆಟದ ಮೂಲಕ ಅವರು ಕೇವಲ 30 ನಿಮಿಷದಲ್ಲಿ ನಿರಾಯಾಸವಾಗಿ ಗೆಲುವನ್ನು ದಕ್ಕಿಸಿಕೊಂಡರು.
ವಿಶ್ವ ರ್ಯಾಂಕಿಂಗ್‌ನಲ್ಲಿ 22ನೇ ಸ್ಥಾನದಲ್ಲಿರುವ ಸೇನ್ ಅವರು, ಫೈನಲ್‌ನಲ್ಲಿ 12ನೇ ಶ್ರೇಯಾಂಕದ ಚೌ ಟಿಯೆನ್ ಚೆಮ್ ಅವರನ್ನು ಎದುರಿಸುವರು.