Mysore
15
clear sky

Social Media

ಶನಿವಾರ, 13 ಡಿಸೆಂಬರ್ 2025
Light
Dark

ಕೊಹ್ಲಿ-ಜಡೇಜಾ ಕಮಾಲ್‌: ಹರಿಣ ಪಡೆಗಳ ಬಗ್ಗು ಬಡಿದ ಭಾರತ

ಕೋಲ್ಕತ್ತಾ : ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ತನ್ನ ಅಜೇಯ ಓಟ ಮುಂದುವರೆಸಿರುವ ಭಾರತ, ವಿಶ್ವಕಪ್‌ನ 37ನೇ ಪಂದ್ಯದಲ್ಲಿ ದ. ಆಫ್ರಿಕಾ ವಿರುದ್ಧ 243 ರನ್‌ಗಳ ಭರ್ಜರಿ ಜಯ ದಾಖಲಿಸಿದೆ.

ಇಲ್ಲಿನ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ನಡೆದ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪಂದ್ಯದಲ್ಲಿ ಜಯ ದಾಖಲಿಸುವ ಮೂಲಕ ಈ ಟೂರ್ನಿಯಲ್ಲಿ ತಾನಾಡಿದ ಲೀಗ್‌ನ 8 ಪಂದ್ಯಗಳನ್ನು ಗೆದ್ದು ಬೀಗಿದೆ.

ಭಾರತ ನೀಡಿದ 326 ರನ್‌ಗಳ ಬ್ರಹತ್‌ ಮೊತ್ತ ಬೆನ್ನತ್ತಿದ ದ. ಆಫ್ರಿಕಾ ತಂಡ ಜಡೇಜಾ ಮಾರಕ ಬೌಲಿಂಗ್‌ಗೆ ಬಲಿಯಾಯಿತು. 27.1 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್‌ ಕಳೆದುಕೊಂಡು ಕೇವಲ 83 ರನ್‌ಗಳಿಸಿ 243ರನ್‌ಗಳ ಹೀನಾಯ ಸೋಲು ಅನುಭವಿಸಿತು.

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ನಿಗದಿತ 50 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 326 ರನ್ ಗಳಿಸಿತು. ರೋಹಿತ್ ಶರ್ಮಾ ಮತ್ತು ಶುಭ್‌ಮನ್ ಗಿಲ್ ಉತ್ತಮ ಆರಂಭವನ್ನು ನೀಡಿದರು. ರೋಹಿತ್ ಶರ್ಮಾ 24 ಎಸೆತಗಳಲ್ಲಿ 6 ಸ್ಫೋಟಕ ಬೌಂಡರಿ ಮತ್ತು 2 ಸಿಕ್ಸರ್‌ಗಳೊಂದಿಗೆ 40 ರನ್ ಗಳಿಸಿ ರಬಾಡಗೆ ವಿಕೆಟ್‌ ಒಪ್ಪಿಸಿ ಹೊರನಡೆದರು. 23ರನ್‌ ಗಳಿಸಿದ್ದ ಶುಭಮನ್ ಗಿಲ್ ಕೇಶವ್‌ ಮಹಾರಾಜ್‌ ಎಸೆತದಲ್ಲಿ ಕೀನ್‌ ಬೋಲ್ಡ್‌ ಆದರು. ನಂತರ ವಿರಾಟ್ ಕೊಹ್ಲಿ ಅವರು ಶ್ರೇಯಸ್ ಅಯ್ಯರ್ ಜೊತೆಗೂಡಿ ಇನ್ನಿಂಗ್ಸ್ ಕೈಗೆತ್ತಿಕೊಂಡು ಸ್ಕೋರ್ ಹೆಚ್ಚಿಸಿದರು.

ಅಯ್ಯರ್ 87 ಎಸೆತಗಳಲ್ಲಿ 7 ಬೌಂಡರಿ ಮತ್ತು 2 ಸ್ಫೋಟಕ ಸಿಕ್ಸರ್‌ಗಳೊಂದಿಗೆ 77 ರನ್ ಗಳಿಸಿ ಲುಂಗಿ ಎನ್‌ಗಿಡಿ  ಔಟಾದರು. ಇದಾದ ಬಳಿಕ ಕೆಎಲ್ ರಾಹುಲ್ 8 ರನ್‌, ಸೂರ್ಯಕುಮಾರ್ ಯಾದವ್ 22 ರನ್‌ಗಳಿಸಿ ಔಟಾದರು. ಕೊನೆಯಲ್ಲಿ ಅಬ್ಬರಿಸಿದ ರವೀಂದ್ರ ಜಡೇಜಾ 15 ಎಸೆತಗಳಲ್ಲಿ 3 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ 19 ರನ್ ಗಳಿಸಿ ಅಜೇಯರಾಗಿ ಉಳಿದರು.

ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ವಿರಾಟ್ ಕೊಹ್ಲಿ 119 ಎಸೆತಗಳಲ್ಲಿ 10 ಬೌಂಡರಿಗಳ ನೆರವಿನಿಂದ ತಮ್ಮ ಏಕದಿನ ಕ್ರಿಕೆಟ್‌ ವೃತ್ತಿಜೀವನದ 49ನೇ ಶತಕ ದಾಖಲಿಸಿದರು. ಇದರೊಂದಿಗೆ ಏಕದಿನ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ಶತಕ ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ಗಳಿಸಿದ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಈ ಪಂದ್ಯದಲ್ಲಿ ವಿರಾಟ್ 121 ಎಸೆತಗಳಲ್ಲಿ 10 ಎಸೆತಗಳಲ್ಲಿ 101 ರನ್ ಗಳಿಸಿದರು.

ಇನ್ನು ಭಾರತ ನೀಡಿದ ಬೃಹತ್‌ ಮೊತ್ತ ಬೆನ್ನತ್ತಿದ ದ. ಆಫ್ರಿಕಾಗೆ ಆರಂಭಿಕ ಆಘಾತ ಉಂಟಾಯಿತು. ತನ್ನ ಎರಡನೇ ಓವರ್‌ ನಲ್ಲಿಯೇ ಆಘಾತ ನೀಡಿದ ಮುಹಮ್ಮದ್‌ ಸಿರಾಜ್‌ ಕ್ವಿಂಟನ್‌ ಡಿಕಾಕ್‌ ರನ್ನು 5 ರನ್‌ ಗೆ ಎಲ್‌ ಬಿ ಡಬ್ಲೂ ಮಾಡಿದರೆ, ಬಳಿಕ ದಾಳಿ ಮುಂದುವರಿಸಿದ ಮುಹಮ್ಮದ್‌ ಶಮಿ 9 ರನ್‌ ಗೆ ಮಾರ್ಕ್ರಮ್‌ ವಿಕೆಟ್‌ ಕಬಳಿಸಿದರು. ಜಡೇಜಾ ಬೌಲಿಂಗ್‌ ನಲ್ಲಿ ನಾಯಕ ಬವುಮ 11 ರನ್ ಹಾಗೂ ಕ್ಲಾಸನ್‌ 1 ರನ್‌ ಗೆ ಸೀಮಿತರಾದರು. ವಾನ್ ಡೆರ್ ಡುಸ್ಸೆನ್ 13 ರನ್ ಗೆ ಶಮಿ ಎಸೆತದಲ್ಲಿ ಎಲ್ ಬಿ ಡಬ್ಲ್ಯೂ ಬಲೆಗೆ ಬಿದ್ದರು. ಡೆವಿಡ್‌ ಮಿಲ್ಲರ್‌ 11 ರನ್‌, ಮಾರ್ಕೋ ಎನ್ಸನ್‌ 14 ಹೊರತು ಪಡಿಸಿ ಬೇರಾರಿಂದಲೂ ನಿರೀಕ್ಷಿತ ಆಟ ಮೂಡಿ ಬರಲಿಲ್ಲ.

ಅಂತಿಮವಾಗಿ 83 ರನ್‌ಗಳಿಗೆ ಸರ್ವಪತನ ಕಂಡ ಹರಿಣ ಪಡೆ ಭಾರತದ ಮುಂದೆ ಸೋಲೊಪ್ಪಿಕೊಂಡಿತು.

ಪಂದ್ಯ ಶ್ರೇಷ್ಢ : ವಿರಾಟ್‌ ಕೊಹ್ಲಿ

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!