Mysore
22
broken clouds
Light
Dark

ಸೋದರ ಮಾವನ ಹುಟ್ಟೂರಿಗೆ ಮೊದಲ ಬಾರಿಗೆ ಭೇಟಿ ನೀಡಿದ ಕೆಎಲ್‌ ರಾಹುಲ್‌!

ಮಂಗಳೂರು: ಕನ್ನಡ ಖ್ಯಾತ ಕ್ರಿಕೆಟಿಗ ಕೆಎಲ್‌ ರಾಹುಲ್‌ ಅವರು ಮದುವೆಯಾದ ಮೊದಲ ಬಾರಿಗೆ ತಮ್ಮ ಸೋದರ ಮಾವ ಸುನೀಲ್‌ ಶೆಟ್ಟಿ ಅವರ ಹುಟ್ಟೂರಾದ ಮಂಗಳೂರಿಗೆ ಮೊದಲ ಬಾರಿಗೆ ಭೇಟಿ ನೀಡಿದ್ದಾರೆ.

ಇಲ್ಲಿನ ಬಪ್ಪನಾಡು ದುರ್ಗಾಪರಮೇಶ್ವರಿ ಕ್ಷೇತ್ರಕ್ಕೆ ಕ್ರಿಕೆಟಿಗ ಕೆಎಲ್‌ ರಾಹುಲ್‌ ಹಾಗೂ ಅವರ ಪತ್ನಿ ಅಥಿಯಾ ಶೆಟ್ಟಿ ಜತೆಯಲ್ಲಿ ಭೇಟಿ ನೀಡಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಮುಲ್ಕಿಯ ಶಿಮಂತೂರು ಶ್ರೀ ಆದಿ ಜರ್ನಾಧನ ದೇವಾಲಯ ದರ್ಶನ, ಕಕ್ವಗುತ್ತು ಮೂಲನಾಗ ದೇವರ ದರ್ಶನ ಪಡೆದ ಬಳಿಕ ದುರ್ಗಾಪರಮೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ ಪ್ರಸಾದ ವಿನಿಯೋಗಿಸಿದ್ದಾರೆ.

ಮೂಲತಃ ಮುಲ್ಕಿ ಮೂಲದವರಾದ ಸುನೀಶ್‌ ಶೆಟ್ಟಿ ಬಾಲಿವುಡ್‌ಗೆ ಎಂಟ್ರಿಕೊಟ್ಟು ಬಳಿಕ ಬಹಳ ದೊಡ್ಡ ಹೆಸರು ಮಾಡಿದರು. 2023ರ ಜನವರಿಯಲ್ಲಿ ಕೆ ಎಲ್‌ ರಾಹುಲ್‌ ಜತೆಯಲ್ಲಿ ಸುನೀಲ್‌ ಶೆಟ್ಟಿ ತಮ್ಮ ಮಗಳ ಮದುವೆ ಮಾಡಿದರು.

ಇದಾದ ಬಳಿಕ ಇದೇ ಮೊದಲ ಬಾರಿಗೆ ಕೆಎಲ್‌ ರಾಹುಲ್‌ ದಂಪತಿ ಮುಲ್ಕಿಗೆ ಆಗಮಿಸಿ ದೇವರ ದರ್ಶನ ಪಡೆದಿದ್ದಾರೆ. ಇನ್ನು ಕೆಎಲ್‌ ರಾಹುಲ್‌ ಕಂಡ ಅಭಿಮಾನಿಗಳು ಫೋಟೋಗಾಗಿ ಮುಗಿಬಿದ್ದಿದ್ದಾರೆ.