Mysore
23
overcast clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

IPL 2024: ಸಾಲ್ಟ್‌ ಅರ್ಧಶತಕ: ಲಖನೌ ವಿರುದ್ಧ ಕೆಕೆಆರ್‌ಗೆ ಭರ್ಜರಿ ಗೆಲುವು!

ಕೋಲ್ಕತ್ತಾ: ಸ್ಟಾರ್ಕ್‌ ಅವರ ಬೌಲಿಂಗ್‌, ಪಿಲಿಪ್‌ ಸಾಟ್‌ ಅರ್ಧಶತಕ ನೆರವಿನಿಂದ ಎಲ್‌ಎಸ್‌ಜಿ ವಿರುದ್ಧ ಕೋಲ್ಕತ್ತ ನೈಟ್ ರೈಡರ್ಸ್ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.

ಇಲ್ಲಿನ ಈಡೆನ್‌ ಗಾರ್ಡನ್‌ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್‌ ಟೂರ್ನಿಯ ಲೀಗ್‌ ಪಂದ್ಯದಲ್ಲಿ ಕೆಕೆಆರ್‌ ಹಾಗೂ ಎಲ್‌ಎಸ್‌ಜಿ ನಡುವಿನ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಲಖನೌ ಸೂಪರ್‌ಜೈಂಟ್ಸ್ ತಂಡವು 20 ಓವರ್‌ಗಳ ಅಂತ್ಯಕ್ಕೆ 7 ವಿಕೆಟ್ ಕಳೆದುಕೊಂಡು 161 ರನ್ ಕಲೆ ಹಾಕಿ, 162 ರನ್‌ಗಳ ಗುರಿ ನೀಡಿತು. ಈ ಮೊತ್ತ ಬೆನ್ನತ್ತಿದ ಕೊಲ್ಕತ್ತಾ ನೈಟ್‌ ರೈಡರ್ಸ್‌ 15.4 ಓವರ್‌ಗಳಲ್ಲಿ 2 ವಿಕೆಟ್‌ ಕಳೆದುಕೊಂಡು 162ರನ್‌ ಗಳಿಸಿತು.

ಎಲ್‌ಎಸ್‌ಜಿ ಇನ್ನಿಂಗ್ಸ್‌: ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ಲಖನೌ ಬ್ಯಾಟರ್‌ಗಳು ಆರಂಭದಿಂದಲೇ ರನ್ ಗಳಿಸಲು ಪರದಾಡಿದರು. ಕ್ವಿಂಟನ್ ಡಿಕಾಕ್ 10 ರನ್ ಗಳಿಸಿದರೆ, ದೀಪಕ್ ಹೂಡಾ 8 ರನ್‌ಗೆ ಪೆವಿಲಿಯನ್ ಸೇರಿಕೊಂಡರು. ಸ್ಟೋಯ್ನಿಸ್‌ 10, ಕೃನಾಲ್‌ ಪಾಂಡ್ಯ 7, ಅರ್ಷದ್‌ ಖಾನ್‌ 5 ರನ್‌ ಬಾರಿಸಿ ಹೊರ ನಡೆದರು. ಒಂದೆಡೆ ವಿಕೆಟ್ ಬೀಳುತ್ತಿದ್ದರೇ ಮತ್ತೊಂದೆಡೆ ಬ್ಯಾಟ್ ಬೀಸಿದ ನಾಯಕ ಕೆ.ಎಲ್. ರಾಹುಲ್ 39 ರನ್ ಗಳಿಸಿದರು. ಆಯುಶ್ ಬದೋನಿ 29 ರನ್‌ ಗಳಿಸಿದರೇ ಕೊನೆಯಲ್ಲಿ ನಿಕೋಲಸ್ ಪೂರನ್ 32 ಎಸೆತಗಳಲ್ಲಿ 2ಬೌಂಡರಿ ಹಾಗೂ 4 ಸಿಕ್ಸರ್‌ ಸಹಿತ 45 ರನ್ ಸಿಡಿಸುವ ಮೂಲಕ ಸ್ಪರ್ಧಾತ್ಮಕ ಮೊತ್ತ ಗಳಿಸಲು ಪ್ರಯತ್ನಿಸಿದರು.

ಕೆಕೆಆರ್‌ ಪರ ಮಿಚೆಲ್ ಸ್ಟಾರ್ಕ್ 3 ವಿಕೆಟ್ ಪಡೆದರು. ಉಳಿದಂತೆ, ವೈಭವ್ ಅರೋರಾ, ಸುನಿಲ್ ನಾರಾಯಣ್, ವರುಣ್ ಚಕ್ರವರ್ತಿ ಮತ್ತು ರಸೇಲ್ ತಲಾ ಒಂದೊಂದು ವಿಕೆಟ್ ಪಡೆದು ಮಿಂಚದರು.

ಕೆಕೆಆರ್‌ ಇನ್ನಿಂಗ್ಸ್‌: ಈ ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ ಕೆಕೆಆರ್‌ಗೆ ಪಿಲಿಪ್‌ ಸಾಲ್ಟ್‌ ಉತ್ತಮ ಆರಂಭ ಒದಗಿಸಿದರು. ಸಾಲ್ಟ್‌ ಓಟಾಗದೇ 47 ಎಸೆತಗಳಲ್ಲಿ 14ಬೌಂಡರಿ, 3 ಸಿಕ್ಸರ್‌ ಸಹಿತ 89 ರನ್‌ ಗಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ಇವರಿಗೆ ಜೊತೆಯಾಗಿ ನಾಯಕ ಶ್ರೇಯಸ್‌ ಅಯ್ಯರ್‌ 38 ರನ್‌ ಬಾರಿಸಿದರು. ಉಳಿದಂತೆ ನರೈನ್‌ 6 ಹಾಗೂ ರಘುವಂಶಿ 7 ರನ್‌ ಬಾರಿಸಿದರು. ಕೇವಲ 2 ವಿಕೆಟ್‌ ಕಳೆದುಕೊಂಡು ತವರು ನೆಲದಲ್ಲಿ ಕೆಕೆಆರ್‌ ಗೆದ್ದು ಬೀಗಿತು.

ಪಂದ್ಯ ಶ್ರೇಷ್ಠ: ಪಿಲಿಪ್‌ ಸಾಲ್ಟ್‌

Tags: