Mysore
15
overcast clouds

Social Media

ಗುರುವಾರ, 18 ಡಿಸೆಂಬರ್ 2025
Light
Dark

ಸೆಮಿಸ್‌ ಕದನದಲ್ಲಿ ಭಾರತಕ್ಕೆ ಕೀವಿಸ್‌ ಸವಾಲು: ಕಾಡಲಿದೆಯಾ ವಾಂಖೆಡೆ

ಮುಂಬೈ : ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿ ಅಂತಿಮ ಘಟ್ಟ ತಲುಪಿದ್ದು, ಇಂದು (ಬುಧವಾರ) ಭಾರತ ಮತ್ತು ನ್ಯೂಜಿಲ್ಯಾಂಡ್‌ ತಂಡಗಳು ಮೊದಲ ಸಮಿಸ್‌ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ರಣರೋಚಕ ಪಂದ್ಯಕ್ಕೆ ಸಾಕ್ಷಿಯಾಗಿರುವ ವಾಂಖೆಡೆ ಸ್ಟೇಡಿಯಂ ಬಳಿ ಸಾವಿರಾರು ಕ್ರಿಕೆಟ್‌ ಪ್ರಮಿಗಳು ಧಾವಿಸಿದ್ದು, ಮುಂಜಾನೆಯಿಂದಲೇ ಸಾವಿರಾರು ಸಂಖ್ಯೆಯಲ್ಲಿ ತ್ರಿವರ್ಣ ಧ್ವಜ ಹಿಡಿದು ಭಾರತ ಪರ ಘೋಷಣೆ ಕೂಗುತ್ತಿದ್ದಾರೆ.

ಭಾರತೀಯ ಕಾಲಮಾನ ಮದ್ಯಾಹ್ನ 2 ಗಂಟೆಗೆ ಈ ಪಂದ್ಯ ಆರಂಭವಾಗಲಿದೆ. ಇತ್ತಾ ಭಾರತದ ಮೇಲೆ 2019ರ ಸೆಮಿ ಫೈನಲ್‌ ಪಂದ್ಯದಲ್ಲಿ ಜಯ ದಾಖಲಿಸಿದ್ದ ನ್ಯೂಜಿಲ್ಯಾಂಡ್‌ ತಂಡ ಮತ್ತೊಂದು ಜಯದ ಕನಸಿನಲ್ಲಿದೆ. ಆದರೆ, ತನ್ನ ತವರು ನೆಲದಲ್ಲಿ ಟೂರ್ನಿಯ ಆಡುತ್ತಿರುವ ಭಾರತ ಲೀಗ್‌ ಹಂತದ ಪಂದ್ಯದಲ್ಲಿ ನ್ಯೂಜಿಲ್ಯಾಂಡ್‌ ತಂಡವನ್ನು ಬಗ್ಗು ಬಡಿದ ಸಂತಸದಲ್ಲಿದೆ. ಇಂದಿನ ರಣರೋಛಕ ಪಂದ್ಯದಲ್ಲಿ ಗೆದ್ದ ತಂಡ ಫೈನಲ್‌ಗೆ ನೇರ ಪ್ರವೇಶ ಪಡೆದರೇ ಸೋತ ತಂಡ ಟೂರ್ನಿಯಿಂದ ಹೊರ ಬೀಳಲಲಿದೆ.

ಕಾಡಲಿದೆಯಾ ವಾಂಖೆಡೆ: ಭಾರತದ ಪಾಲಿಗೆ ಸೆಮಿಸ್‌ನಲ್ಲಿ ದೊಡ್ಡ ತಲೆ ನೋವಾಗಿ ಈ ಮೈದಾನ ಕಾಡಲಿದೆ. ಭಾರತ ಇದುವರೆಗೆ 2011ರ ಏಕದಿನ ವಿಶ್ವಕಪ್‌ ಫೈನಲ್‌ ನಲ್ಲಿ ಭಾರತ ತಂಡ ಶ್ರೀಲಂಕಾ ವಿರುದ್ಧ ಜಯ ದಾಖಲಿಸಿದ್ದು ಹೊರತುಪಡಿಸಿದರೇ, ಇದುವರೆಗೆ ಐಸಿಸಿಯ ಪ್ರತಿಷ್ಠೀತ ಪಂದ್ಯದಲ್ಲಿ ಭಾರತ ಮೂರು ಸೆಮಿಸ್‌ ಪಂದ್ಯಗಳನ್ನು ವಾಂಖೆಡೆ ಮೈದಾನಲ್ಲಿ ಆಡಿದ್ದು, ತಾನಾಡಿದ ಎಲ್ಲಾ ಪಂದ್ಯಗಳಲ್ಲಿಯೂ ಸೋಲಿನ ಕಹಿ ಉಂಡಿದೆ.

1987ರ ವಿಶ್ವಕಪ್‌ನ ಸೆಮಿಸ್‌ ಪಂದ್ಯದಲ್ಲಿ ಭಾರತ ಇಂಗ್ಲೆಂಡ್‌ ವಿರುದ್ಧ 35 ರನ್‌ಗಳಿಂದ ಪರಾಭವಗೊಂಡರೇ, 1989ರ ನೆಹರು ಕಪ್‌ ಡೂರ್ನಿಯಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ 8 ವಿಕೆಟ್‌ಗಳ ಸೋಲು ಕಂಡಿತು. ಕೊನೆಯದಾಗಿ ವಾಂಖೆಡೆಯಲ್ಲಿ ಆಡಿದ 2016ರ ಟಿ-20 ವಿಶ್ವಕಪ್‌ ಸೆಮಿ ಪಂದ್ಯದಲ್ಲಿ ಭಾರತ ವಿಂಡೀಸ್‌ ವಿರುದ್ಧ ಹಿನಾಯ ಸೋಲು ಕಂಡಿತು. ಈ ಎಲ್ಲಾ ಪಂದ್ಯಗಳು ನಡೆದದ್ದು ವಾಂಖೆಡೆಯಲ್ಲಿಯೇ.

ಇವತ್ತಿನ ಪಂದ್ಯದಲ್ಲಿ ಭಾರತಕ್ಕೆ ದೀಪಾವಳಿ ಹಬ್ಬದ ಸಿಹಿ ಸಿಗಲಿದೆಯಾ ಇಲ್ಲಾ ಎಂದಿನಂತೆ ನಿರಾಸೆ ಹೊತ್ತು ನಿರ್ಗಮಿಸಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.

ಪಿಚ್‌ ರಿಪೋರ್ಟ್‌ : ಬ್ಯಾಟಿಂಗ್‌ಗೆ ಹೆಚ್ಚು ಸಹಕರಿಸುವ ಈ ಮೈದಾನದಲ್ಲಿ ರನ್‌ ಹೊಳೆಯನ್ನು ನಿರೀಕ್ಷಿಸಬಹುದಾಗಿದೆ. ಬೌನ್ಸ್‌ ಹೆಚ್ಚಾಗಿರುವುದರಿಂದ ಸ್ಪಿನ್ನರ್ಸ್‌ಗಳಿಗೆ ಕಠಿಣವಾಗಲಿದೆ. ಎಂದಿನಂತೆ ಟಾಸ್‌ ಗೆದ್ದ ನಾಯಕರು ಬೌಲಿಂಗ್‌ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆಯಿದೆ.

ಟೀಂ ಇಂಡಿಯಾ ಗೆಲುವಿಗೆ ಪ್ರಾರ್ಥನೆ-ಪೂಜೆ: ಇನ್ನೂ ಇವತ್ತಿನ ಪಂದ್ಯ ಹೈ ವೋಲ್ಟೇಜ್‌ ಕದನಕ್ಕೆ ಸಾಕ್ಷಿಯಾಗಿದ್ದು, ಕ್ರೀಡಾಭಿಮಾನಿಗಳು ಬೆಳಗ್ಗೆಯಿಂದಲೇ ದೇಶಾದ್ಯಂತ ಹರಕೆ-ಪೂಜೆ ಸಲ್ಲಿಸುತ್ತಿರುವುದು ಕಂಡುಬಂದಿದೆ.

ಉಭಯ ತಂಡಗಳು
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ವಿಕೆಟ್‌ ಕೀಪರ್‌), ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ರವಿಚಂದ್ರನ್ ಅಶ್ವಿನ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಪ್ರಸಿದ್ಧ್ ಕೃಷ್ಣ.

ನ್ಯೂಜಿಲ್ಯಾಂಡ್ ತಂಡ: ಕೇನ್ ವಿಲಿಯಮ್ಸನ್ (ನಾಯಕ), ಟ್ರೆಂಟ್ ಬೌಲ್ಟ್, ಮಾರ್ಕ್ ಚಾಪ್ಮನ್, ಡೆವೊನ್ ಕಾನ್ವೇ, ಲಾಕಿ ಫರ್ಗುಸನ್, ಮ್ಯಾಟ್ ಹೆನ್ರಿ, ಟಾಮ್ ಲೇಥಮ್, ಡೇರಿಲ್ ಮಿಚೆಲ್, ಜೇಮ್ಸ್ ನೀಶಮ್, ಗ್ಲೆನ್ ಫಿಲಿಪ್ಸ್, ರಚಿನ್ ರವೀಂದ್ರ, ಮಿಚೆಲ್ ಸ್ಯಾಂಟ್ನರ್, ಇಶ್ ಸೋಧಿ, ವಿಲ್ ಯಂಗ್ , ಕೈಲ್ ಜಾಮಿಸನ್.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!