Mysore
15
clear sky

Social Media

ಗುರುವಾರ, 25 ಡಿಸೆಂಬರ್ 2025
Light
Dark

ಏಕದಿನ ವಿಶ್ವಕಪ್‌ನಲ್ಲಿ ಚೊಚ್ಚಲ ವಿಕೆಟ್‌ ಪಡೆದ ಕಿಂಗ್‌ ಕೊಹ್ಲಿ

ಬೆಂಗಳೂರು : ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿ ಒಂದೊಂದು ವಿಶೇಷತೆಗಳಿಗೆ ಸಾಕ್ಷಿಯಾಗಿದ್ದು, ಇಂದು ನಡೆದ ಭಾರತ ಮತ್ತು ನೆದರ್‌ಲ್ಯಾಂಡ್ಸ್‌ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಚೊಚ್ಚಲ ವಿಕೆಟ್‌ ಪಡೆದು ಸಂಭ್ರಮಿಸಿದ್ದಾರೆ.

ಭಾರತ ನೀಡಿದ 411ರನ್‌ಗಳ ಗುರಿ ಬೆನ್ನತ್ತಿದ ನೆದರ್‌ಲ್ಯಾಂಡ್ಸ್‌ ತಂಡವು ಅವನತಿಯತ್ತ ಹೆಜ್ಜೆಹಾಕಿದೆ. 72 ರನ್‌ಗಳಿಗೆ ಎರಡು ವಿಕೆಟ್‌ ಕಳೆದುಕೊಂಡು ನಂತರ ನಾಯಕ ಸ್ಕಾಟ್‌ ಎಡ್ವರ್ಡ್ಸ್‌ ಹಾಗೂ ಸೈಬ್ರಾಂಡ್‌ ಉತ್ತಮ ಜತೆಯಾಟವಾಡುತ್ತಿದ್ದರು. ಈ ಜತೆಯಾಟ ಬೇರ್ಪಡಿಸುವಲ್ಲಿ ವಿರಾಟ್‌ ಯಶಸ್ವಿಯಾಗಿದ್ದಾರೆ.

25ನೇ ಓವರ್‌ ಬೌಲ್‌ ಮಾಡಿದ ಕೊಹ್ಲಿ ತಾವು ಮಾಡಿದ ಮೂರನೇ ಎಸೆತದಲ್ಲಿ ನಾಯಕ ಎಡ್ವರ್ಡ್ಸ್‌ ರನ್ನು ಔಟ್‌ ಮಾಡಿದರು. ಕೀಪರ್‌ ಕೆ ಎಲ್‌ ರಾಹುಲ್‌ ಕೈಗೆ ಕ್ಯಾಚಿತ್ತು ನಿರ್ಗಮಿಸಿದರು. ಆ ಮೂಲಕ ವಿರಾಟ್‌ ಕೊಹ್ಲಿ ತಮ್ಮ ಚೊಚ್ಚಲ ವಿಕೆಟ್‌ ಪಡೆದು ಸಂಭ್ರಮಿಸಿದರು.

ಈ ಪಂದ್ಯದಲ್ಲಿ ವಿರಾಟ್‌ 3 ಓವರ್‌ ಬೌಲ್‌ ಮಾಡಿ 13 ರನ್‌ ನೀಡಿ 1 ವಿಕೆಟ್‌ ಕಬಳಿಸಿದರು. ವಿರಾಟ್‌ ಜೊತೆ ಶುಭ್‌ಮನ್‌ ಗಿಲ್‌ ಹಾಗೂ ಸೂರ್ಯ ಕುಮಾರ್‌ ಯಾದವ್‌ ಕೂಡ ಬೌಲ್‌ ಮಾಡಿದ್ದು ವಿಶೇಷವಾಗಿತ್ತು.

ಟೂರ್ನಿ ಆರಂಭವಾಗುವ ಮುನ್ನವೇ ರೋಹಿತ್‌ ಶರ್ಮಾ ವಿರಾಟ್‌ ಅವರನ್ನು ನಾವು 6ನೇ ಬೌಲರ್‌ ಅಗಿ ಬಳಸಲಿದ್ದೇವೆ ಎಂದು ಹೇಳಿಕೆ ನೀಡಿದ್ದನ್ನು ನೆನೆಯಬಹುದಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!