Mysore
18
clear sky

Social Media

ಸೋಮವಾರ, 29 ಡಿಸೆಂಬರ್ 2025
Light
Dark

ನವೆಂಬರ್ 29 ರಿಂದ ಅಲ್ಟಿಮೇಟ್ ಖೋ ಖೋ ಸೀಸನ್ 3 ಪ್ರಾರಂಭ

ಗುರುಗ್ರಾಮ್ : ಭಾರತದ ಖೋ ಖೋ ಫೆಡರೇಷನ್ (ಕೆಕೆಎಫ್ಐ) ಮುಂದಿನ ಮೂರನೇ ಸೀಸನ್ ನ ಅಲ್ಟಿಮೇಟ್ ಖೋ ಖೋ (ಯುಕೆಕೆ) ಆಟಗಾರರ ಹರಾಜಿಗೆ ಮೊದಲ ಬಾರಿಗೆ ಅಂತರರಾಷ್ಟ್ರೀಯ ಆಟಗಾರರನ್ನು ಸೇರಿಸಲಾಗುವುದು ಎಂದು ಘೋಷಿಸಿದೆ.

ಗುರು ಗೋಬಿಂದ್ ಸಿಂಗ್ ಟೆರ್ಸೆಂಟೆನರಿ (SGT) ವಿಶ್ವವಿದ್ಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ KKFI ಅಧ್ಯಕ್ಷ ಸುಧಾಂಶು ಮಿತ್ತಲ್, ಮಿತ್ತಲ್ ‘ಖೋ ಖೋ ಭಾರತದ ಕ್ರೀಡಾ ನಾವೀನ್ಯತೆ ಮತ್ತು ಮಹತ್ವಾಕಾಂಕ್ಷೆಯ ಪ್ರತೀಕವಾಗಿದೆ. ಅಲ್ಟಿಮೇಟ್ ಖೋ ಖೋ ಸೀಸನ್ 3 ನವೆಂಬರ್ 29, 2025 ರಿಂದ ಪ್ರಾರಂಭವಾಗಲಿದೆ. ಮೊದಲ ಬಾರಿಗೆ ಲೀಗ್ ಗೆ ಅಂತರರಾಷ್ಟ್ರೀಯ ಆಟಗಾರರನ್ನು ಸೇರಿಸುವ ಮೂಲಕ ನಾವು ಇನ್ನೊಂದು ದೊಡ್ಡ ಹೆಜ್ಜೆ ಇಡುತ್ತಿದ್ದೇವೆ ಎಂದರು.

ಹರಿಯಾಣ ಸರ್ಕಾರದ ರಾಜ್ಯ ಸಚಿವ ಗೌರವ್ ಗೌತಮ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೆಕೆಎಫ್ಐಯು ಖೋ ಖೋವನ್ನು ಜಾಗತಿಕ ಮಟ್ಟದಲ್ಲಿ ಪ್ರಚಾರ ಮಾಡುವ ಮತ್ತು ಹರಿಯಾಣದಲ್ಲಿ ಕ್ರೀಡಾ ಅಭಿವೃದ್ಧಿಯ ಸ್ಥಿತಿಯನ್ನು ಸುಧಾರಿಸುವ ಪ್ರಯತ್ನಗಳನ್ನು ಪ್ರಶಂಸಿಸಿದರು.

ಇದೇ ಸಂದರ್ಭದಲ್ಲಿ KKFI ಮತ್ತು SGT ವಿಶ್ವವಿದ್ಯಾಲಯವು ದೇಶೀಯ ಕ್ರೀಡೆಗಳಿಗಾಗಿ ಶಿಕ್ಷಣ ಮತ್ತು ವೈಜ್ಞಾನಿಕ ಸಂಪತ್ತು ಅಭಿವೃದ್ಧಿಗೆ ಒಟ್ಟಾಗಿ ಕೆಲಸ ಮಾಡುವ ಉದ್ದೇಶದಿಂದ ಒಪ್ಪಂದ ಪತ್ರವೊಂದಕ್ಕೆ ಸಹಿ ಮಾಡಲಾಗಿದೆ.
2022ರಲ್ಲಿ ಆರಂಭವಾದ UKK ಈಗಾಗಲೇ ಪ್ರಖ್ಯಾತಿಯನ್ನು ಗಳಿಸಿದ್ದು, ಪ್ರೋ ಕಬಡ್ಡಿ ಲೀಗ್ ಮತ್ತು ಇಂಡಿಯನ್ ಸೂಪರ್ ಲೀಗ್ ನಂತರದ ದೇಶದ ಮೂರನೇ ಅತ್ಯಧಿಕ ವೀಕ್ಷಿತ ಕ್ರೀಡಾ ಲೀಗ್ ಆಗಿದೆ. ಮೊದಲ ಸೀಸನ್ನಲ್ಲಿ ಒಡಿಶಾ ಜಗರ್ನಾಟ್ಸ್ ವಿಜೇತರಾದರೆ, 2023–24ರಲ್ಲಿ ಗುಜರಾತ್ ಜೈಂಟ್ಸ್ ಚಾಂಪಿಯನ್ ಆಗಿದ್ದಾರೆ.

Tags:
error: Content is protected !!