ಪ್ಯಾರಿಸ್: ಪುರುಷರ ಸಿಂಗಲ್ಸ್ ಸ್ಕಲ್ ಆಥ್ಲೀಟ್ ಬಾಲರಾಜ್ ಪನ್ವಾರ್ ಹಾಗೂ ಜೂಡೋಕಾ ತುಲಿಕಾ ಅವರು ತಮ್ಮ ಒಲಿಂಪಿಕ್ಸ್ ಪಯಣವನ್ನು ಕೊನೆಗೊಳಿಸಿದ್ದಾರೆ ಇದರೊಂದಿಗೆ ಸ್ಕಲ್ ನಲ್ಲಿ ಪದಕ ಗೆಲ್ಲು ಭಾರತದ ಆಸೆ ನಿರಾಸೆಯಾಗಿದೆ
ಎಡವಿದ ರೋಯಿಂಗ್: ಸಿಂಗಲ್ಸ್ ಸ್ಕಲ್ ಆಥ್ಲೀಟ್ ಸ್ಪರ್ಧೆಯಲ ಕೊನೆಯ ಡಿ ನಲ್ಲಿ 7:02.37 ಸಮಯದೊಂದಿಗೆ ಬಾಲರಾಜ್ 5 ನೇ ಸ್ಥಾನ ಪಡೆದು ಪ್ಯಾರಿಸ್ ಗೇಮ್ ನಿಂದ ಹೊರಬಿದ್ದಿದ್ದಾರೆ. ತಮ್ಮ ಮೊದಲ ಒಲಿಂಪಿಕ್ಸ್ನಲ್ಲಿ ಬಾಲರಾಜ್ ಒಟ್ಟಾರೆ 23ನೇ ಸ್ಥಾನ ಪಡೆದಿದ್ದು ಭಾರತದ ಪರವಾಗಿ ಒಲಿಂಪಿಕ್ಸ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವಲ್ಲಿ ಬಾಲರಾಜ್ ಎಡವಿದ್ದಾರೆ
ತುಲಿಕಾ ಮಾನ್ ತಪಸ್ಸು ವಿಫಲ: ಜೂಡೋಕಾ ತುಲಿಕಾ ಮಾನ್ ಕ್ಯೂಬಾದ ಇಡಾಲಿಸ್ ಒರ್ಟಿಜ್ ವಿರುದ್ಧ 28 ಸಕೆಂಡ್ ಗಳ ನಂತರ 10-0 ಅಂತರದಲ್ಲಿ ಮಹಿಳೆಯರ 78+ ಕೆಜಿ ತೂಕ ವಿಭಾಗದ 32 ನೇ ಸುತ್ತಿನಲ್ಲಿ ಸೋಲುಕಂಡಿದ್ದಾರೆ. ಈ ಮೂಲಕ ಇವರು ಕೂಡ 2024 ಪ್ಯಾರಿಸ್ ಒಲಿಂಪಿಕ್ ನಿಂದ ಹೊರಬಿದ್ದಿದ್ದಾರೆ





